Ad

ಮಹಿಳಾ ಕಾನ್‌ಸ್ಟೆಬಲ್ ಮೇಲೆ ಪೊಲೀಸರೇ ಅತ್ಯಾಚಾರ: ಆರೋಪಿಗಳು ವಶಕ್ಕೆ

ಮಹಿಳಾ ಕಾನ್‌ಸ್ಟೆಬಲ್ ಮೇಲೆ ಪೊಲೀಸರೇ ಅತ್ಯಾಚಾರವೆಸಗಿರುವ ಘಟನೆ ಭೂಪಾಲಪಲ್ಲಿ ನಡೆದಿದೆ.  

ತೆಲಂಗಾಣ: ಗನ್‌ಪಾಯಿಂಟ್‌ನಲ್ಲಿ ಮಹಿಳಾ ಕಾನ್‌ಸ್ಟೆಬಲ್ ಮೇಲೆ ಪೊಲೀಸರೇ ಅತ್ಯಾಚಾರವೆಸಗಿರುವ ಘಟನೆ ಭೂಪಾಲಪಲ್ಲಿಯಲ್ಲಿ ನಡೆದಿದೆ.

Ad
300x250 2

ಈ ಪ್ರಕರಣಕ್ಕೆ ಸಂಬಂಧಿಸಿ ಅತ್ಯಾಚಾರವೆಸಗಿದ ಪೊಲೀಸರನ್ನು ಸೇವೆಯಿಂದ ತೆಗೆದುಹಾಕಲಾಗಿದೆ. ಕಾಳೇಶ್ವರಂ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಭವಾನಿ ಸೇನ್, ಜಯಶಂಕರ್ ಎಂಬವರು ಮಹಿಳಾ ಕಾನ್‌ಸ್ಟೆಬಲ್ ಮೇಲೆ ಅತ್ಯಾಚಾರವೆಸಗಿದ್ದರು. ಬಂದೂಕು ತೋರಿಸಿ ಕ್ರೌರ್ಯ ಮೆರೆದಿದ್ದರು.

ಅತ್ಯಾಚಾರವೆಸಗಿದ ಆರೋಪದಲ್ಲಿ ಪೊಲೀಸರನ್ನು ಬಂಧಿಸಿ 14 ದಿನಗಳ ಕಾಲ ರಿಮಾಂಡ್​ಗೆ ನೀಡಲಾಗಿದೆ. ಈ ಹಿಂದೆಯೂ ಎಸ್‌ಐ ತನ್ನ ಹುದ್ದೆಯ ಲಾಭ ಪಡೆದು ಮೂವರು ಮಹಿಳಾ ಕಾನ್‌ಸ್ಟೆಬಲ್‌ಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂಬ ಆರೋಪ ಇದ್ದು ಪ್ರಕರಣ ಕೂಡ ದಾಖಲಿಸಲಾಗಿತ್ತು.

Ad
Ad
Nk Channel Final 21 09 2023
Ad