Bengaluru 22°C
Ad

ಪತಿ ಮೊಬೈಲ್​​ ಕಿತ್ತುಕೊಂಡನೆಂದು ವಿದ್ಯುತ್​ ಶಾಕ್​ ನೀಡಿದ ಪತ್ನಿ

ಪತಿ ಮೊಬೈಲ್​​ ಕಿತ್ತುಕೊಂಡನೆಂದು ಪತ್ನಿ ವಿದ್ಯುತ್​ ಶಾಕ್​ ನೀಡಿರುವ ಘಟನೆ ಉತ್ತರ ಪ್ರದೇಶದ ಮೈನ್​ಪುರಿಯಲ್ಲಿ ನಡೆದಿದೆ.

ಉತ್ತರ ಪ್ರದೇಶ: ಪತಿ ಮೊಬೈಲ್​​ ಕಿತ್ತುಕೊಂಡನೆಂದು ಪತ್ನಿ ವಿದ್ಯುತ್​ ಶಾಕ್​ ನೀಡಿರುವ ಘಟನೆ ಉತ್ತರ ಪ್ರದೇಶದ ಮೈನ್​ಪುರಿಯಲ್ಲಿ ನಡೆದಿದೆ.

33 ವರ್ಷದ ಮಹಿಳೆ ಬೇಬಿ ಯಾದವ್​ ತನ್ನ ಪತಿ ಪ್ರದೀಪ್​ ಸಿಂಗ್ ಮೊಬೈಲ್​ ಕಿತ್ತುಕೊಂಡನೆಂದು ಮೊದಲಿಗೆ ಅಮಲು ಪದಾರ್ಥ ನೀಡಿ ಹಾಸಿಗೆಗೆ ಕಟ್ಟಿ ಹಾಕಿದ್ದಾಳೆ. ನಂತರ ಆತನನ್ನು ಥಳಿಸಿದ್ದಾಳೆ. ಬಳಿಕ ವಿದ್ಯುತ್​ ಶಾಕ್​ ನೀಡಿದ್ದಾಳೆ.

ತಾಯಿಯ ವಿಚಿತ್ರ ವರ್ತನೆಯನ್ನು ಕಂಡ 14 ವರ್ಷದ ಮಗ ತಂದೆಯನ್ನು ಕಾಪಾಡಲು ಮುಂದಾಗಿದ್ದಾನೆ. ಈ ವೇಳೆ ತಾಯಿ ಆತನಿಗೂ ಥಳಿಸಿದ್ದಾಳೆ. ಸದ್ಯ ಪತಿ ಪ್ರದೀಪ್​ ಸೈಫೈ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಪತಿ ಪ್ರದೀಪ್​ ಸಿಂಗ್​ ಹೇಳುವಂತೆ, ‘ನನ್ನ ಪತ್ನಿ ದಿನಾಲು ಮೊಬೈಲ್​ನಲ್ಲಿ ಮಾತನಾಡುತ್ತಿರುತ್ತಾಳೆ. ನಾನು ಅದನ್ನು ವಿರೋಧಿಸಿದೆ ಮತ್ತು ಆಕೆಯ ಮನೆಯವರಿಗೆ ತಿಳಿಸಿದ್ದೇನೆ. ಇದರಿಂದ ಕೋಪಗೊಂಡ ಆಕೆ ನನಗೆ ಬೆದರಿಕೆ ಹಾಕಿದ್ದಳು. ಕಳೆದ ವಾರ ನನ್ನ ಮತ್ತು ಮಗನ ಮೇಲೆ ಹಲ್ಲೆ ಮಾಡಿದ್ದಾಳೆ, ಕ್ರಿಕೆಟ್​ ಬ್ಯಾಟ್​​ನಿಂದ ಹಲ್ಲೆ ಮಾಡಿದ್ದಾಳೆ ಎಂದು ಹೇಳಿದ್ದಾರೆ.

 

Ad
Ad
Nk Channel Final 21 09 2023
Ad