Bengaluru 25°C
Ad

ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮುಲ್ ಸ್ಪಷ್ಟನೆ

ಇತ್ತೀಚೆಗೆ ತಿರುಪತಿ ಲಡ್ಡ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ಈ ನಡುವೆಯೇ ಅಮುಲ್ ಶುಕ್ರವಾರ (ಸೆ.20) ಸ್ಪಷ್ಟನೆಯನ್ನು ನೀಡಿದೆ. ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿದೆ ಎಂದು ವಿವಾದ ಸೃಷ್ಟಿಯಾಗಿದೆ.

ಆಂಧ್ರಪ್ರದೇಶ ; ಇತ್ತೀಚೆಗೆ ತಿರುಪತಿ ಲಡ್ಡ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ಈ ನಡುವೆಯೇ ಅಮುಲ್ ಶುಕ್ರವಾರ (ಸೆ.20) ಸ್ಪಷ್ಟನೆಯನ್ನು ನೀಡಿದೆ. ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿದೆ ಎಂದು ವಿವಾದ ಸೃಷ್ಟಿಯಾಗಿದೆ.

ಈ ಕುರಿತು ಸ್ಪಷ್ಟನೆ ನೀಡಿದ ಅಮೂಲ್ ನಾವು ತಿರುಪತಿ ದೇವಸ್ಥಾನಕ್ಕೆ ಎಂದಿಗೂ ತುಪ್ಪವನ್ನು ಸರಬರಾಜು ಮಾಡಿಲ್ಲ. ನಮ್ಮ ಸಂಸ್ಥೆಯಿಂದ ತಿರುಪತಿ ದೇವಸ್ಥಾನಕ್ಕೆ ತುಪ್ಪ (ಅಮುಲ್ ತುಪ್ಪ) ಸರಬರಾಜು ಮಾಡಲಾಗಿದೆ ಎಂದು ಹೇಳಲಾದ ತಪ್ಪು ವರದಿಗಳು ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿವೆ ಎಂದು ಅಮುಲ್ ಇಂಡಿಯಾ ಶುಕ್ರವಾರ ಹೇಳಿದೆ. ಈ ಎಲ್ಲಾ ವರದಿಗಳು ವದಂತಿಗಳಷ್ಟೇ ಎಂದು ಕಂಪನಿ ಹೇಳಿಕೊಂಡಿದೆ.

ಅಮುಲ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ‘ಎಕ್ಸ್’ ನಲ್ಲಿ ಮಾಹಿತಿ ಹಂಚಿಕೊಂಡಿದ್ದು ‘ತಿರುಪತಿ ದೇವಸ್ಥಾನಕ್ಕೆ ತಾನು ಎಂದಿಗೂ ತುಪ್ಪವನ್ನು ಪೂರೈಸಿಲ್ಲ ಎಂದು ಸ್ಪಷ್ಟಪಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗಳು ಸಂಪೂರ್ಣ ತಪ್ಪು ಎಂದು ಅಮುಲ್ ಹೇಳಿದೆ. ಅಮುಲ್, “ನಮ್ಮ ತುಪ್ಪವನ್ನು ಅತ್ಯಾಧುನಿಕ ಮತ್ತು ISO ಪ್ರಮಾಣೀಕೃತ ಸ್ಥಾವರಗಳಲ್ಲಿ ತಯಾರಿಸಲಾಗುತ್ತದೆ. ಇದು ಶುದ್ಧ ಹಾಲಿನ ಕೊಬ್ಬಿನಿಂದ ತಯಾರಿಸಲ್ಪಟ್ಟಿದೆ, ಇದನ್ನು ಗುಣಮಟ್ಟದ ಪರೀಕ್ಷೆಯ ನಂತರ ಮಾತ್ರ ಬಳಸಲಾಗುತ್ತದೆ. ನಮ್ಮ ಎಲ್ಲಾ ಉತ್ಪನ್ನಗಳನ್ನು FSSAI ಮಾನದಂಡಗಳ ಪ್ರಕಾರ ತಯಾರಿಸಲಾಗುತ್ತದೆ ಇದರಲ್ಲಿ ಯಾವುದೇ ರೀತಿಯ ಕಲಬೆರಕೆಗೆ ಅವಕಾಶವಿಲ್ಲ.” ಎಂದು ಸ್ಪಷ್ಟಪಡಿಸಿದೆ.

 

 

 

Ad
Ad
Nk Channel Final 21 09 2023