Bengaluru 22°C
Ad

ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯನ್ನು ನಾವು ನಿರ್ಧರಿಸುತ್ತೇವೆ: ಉದ್ಧವ್‌ ಠಾಕ್ರೆ

ಇಂದು ದೆಹಲಿಯಲ್ಲಿ ಇಂಡಿಯಾ ಒಕ್ಕೂಟ ಪ್ರಧಾನಿ ಅಭ್ಯರ್ಥಿಯನ್ನು ನಾವು ನಿರ್ಧರಿಸುತ್ತೇವೆ. ಎಲ್ಲಾ ದೇಶಭಕ್ತರು ಮತ್ತು ಬಿಜೆಪಿಯಿಂದ ಕಿರುಕುಳಕ್ಕೊಳಗಾದ ಎಲ್ಲರೂ ಸಭೆ ಸೇರುತ್ತೇವೆ ಎಂದು ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ನವದೆಹಲಿ: ಇಂದು ದೆಹಲಿಯಲ್ಲಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯನ್ನು ನಾವು ನಿರ್ಧರಿಸುತ್ತೇವೆ. ಎಲ್ಲಾ ದೇಶಭಕ್ತರು ಮತ್ತು ಬಿಜೆಪಿಯಿಂದ ಕಿರುಕುಳಕ್ಕೊಳಗಾದ ಎಲ್ಲರೂ ಸಭೆ ಸೇರುತ್ತೇವೆ ಎಂದು ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ನಮ್ಮ ಭಾರತ ಮೈತ್ರಿಕೂಟ ರಚನೆಯಾದ ದಿನವೇ ನಾವು ದೇಶದಲ್ಲಿ ಸರ್ವಾಧಿಕಾರವನ್ನು ಕೊನೆಗಾಣಿಸಿ ಸಂವಿಧಾನವನ್ನು ಉಳಿಸಬೇಕೆಂದು ನಿರ್ಧರಿಸಿದ್ದೇವೆ. ಚಂದ್ರಬಾಬು ನಾಯ್ಡು  ಕೂಡ ಬಿಜೆಪಿ ಸರ್ಕಾರದಿಂದ ಕಿರುಕುಳಕ್ಕೊಳಗಾಗಿದ್ದಾರೆ ಎಂದು ಠಾಕ್ರೆ ಹೇಳಿದರು.

ಇಂಡಿಯಾ ಮೈತ್ರಿಯು ಮಹಾರಾಷ್ಟ್ರದಲ್ಲಿ  ಮತ್ತು ರಾಷ್ಟ್ರದಾದ್ಯಂತ ನಿಜವಾಗಿಯೂ ಉತ್ತಮವಾಗಿ ಕೆಲಸ ಮಾಡಿದೆ. ಭಾರತದಲ್ಲಿ ದುರಹಂಕಾರಕ್ಕೆ ಸ್ಥಾನವಿಲ್ಲ ಎಂದು ನಾವು ತೋರಿಸಿದ್ದೇವೆ. ಸಂವಿಧಾನ ವಿರೋಧಿ ಶಕ್ತಿಗಳು, ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳಿಗೆ ಭಾರತದಲ್ಲಿ ಸ್ಥಾನವಿಲ್ಲ ಎಂದರು.

ಮಹಾರಾಷ್ಟ್ರದಲ್ಲಿ ಬಿಜೆಪಿ ಶಿಂಧೆ ಬಣಕ್ಕೆ ಸೋಲಾಗಿದ್ದು ಮಹಾ ವಿಕಾಸ ಅಘಾಡಿ ಮೈತ್ರಿ ಹೆಚ್ಚು ಸ್ಥಾನ ಗೆದ್ದುಕೊಂಡಿದೆ. ಒಟ್ಟು 48 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 13, ಬಿಜೆಪಿ 9, ಶಿವಸೇನೆ (ಉದ್ಧವ್‌ ಠಾಕ್ರೆ) 9, ಎನ್‌ಸಿಪಿ( ಶರಾದ್‌ ಪವಾರ್‌) 8, ಶಿಂಧೆ(ಶಿವಸೇನೆ) 7 ಸ್ಥಾನವನ್ನು ಗೆದ್ದುಕೊಂಡಿದೆ.

Ad
Ad
Nk Channel Final 21 09 2023
Ad