Bengaluru 29°C
Ad

ನಾವು ಎನ್​ಡಿಎ ಜೊತೆ ಸಂಪೂರ್ಣವಾಗಿ ಕಮಿಟ್ ಆಗಿದ್ದೇವೆ: ಪವನ್ ಕಲ್ಯಾಣ್

We are fully committed to NDA: Pawan Kalyan

ಆಂಧ್ರಪ್ರದೇಶ: ಲೋಕಸಭೆ ಚುನಾವಣೆಯಲ್ಲಿ ಜನ ಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಮೊದಲ ಗೆಲುವು ಕಂಡಿದ್ದು, ಎನ್​​ಡಿಎ ಜೊತೆ ಸೇರಿ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಗೆಲುವಿನ ಬಳಿಕ ಪವನ್ ಕಲ್ಯಾಣ್ ಎನ್​ಡಿಎ ಮೈತ್ರಿ ತೊರೆಯುವ ಮಾತೇ ಇಲ್ಲ ಎಂದಿದ್ದಾರೆ.

ಖಾಸಗಿ ಸುದ್ದಿವಾಣಿ ​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪವನ್​ ಕಲ್ಯಾಣ್,  ‘ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆದಿಲ್ಲ. ನಾವು ಎನ್​ಡಿಎ ಜೊತೆ ಸಂಪೂರ್ಣವಾಗಿ ಕಮಿಟ್ ಆಗಿದ್ದೇವೆ. ಎರಡನೇ ಆಲೋಚನೆಯೇ ಇಲ್ಲ’ಎಂದಿದ್ದಾರೆ.

‘ಇದು ಐತಿಹಾಸಿಕ ತೀರ್ಪಿನ ದಿನ. ನಾವು ಆಂಧ್ರಪ್ರದೇಶದ ಜನರಿಗೆ ಜವಾಬ್ದಾರಿಯುತ ಸರ್ಕಾರ ನೀಡಲು ಬದ್ಧರಾಗಿದ್ದೇವೆ. ಎನ್​ಡಿಎ ಸರ್ಕಾರ ಅದನ್ನು ಗೌರವಿಸುತ್ತದೆ’ ಎಂದು ಪವನ್ ಕಲ್ಯಾಣ್ ಅವರು ಸಾರ್ವಜನಿಕವಾಗಿ ಹೇಳಿದ್ದಾರೆ.

ಪೀಠಾಪುರಂ ಕ್ಷೇತ್ರದಿಂದ ಸ್ಪರ್ಧಿಸಿ ಅವರು ದೊಡ್ಡ ಗೆಲುವು ಕಂಡಿದ್ದಾರೆ.

Ad
Ad
Nk Channel Final 21 09 2023
Ad