Bengaluru 28°C
Ad

ವಯನಾಡು, ರಾಯ್​ ಬರೇಲಿಯಲ್ಲಿ ರಾಹುಲ್​ ಗಾಂಧಿಗೆ ಭರ್ಜರಿ ಗೆಲುವು

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಎರಡು ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ವದು, ವಯನಾಡು ಮತ್ತು ರಾಯ್​ ಬರೇಲಿ ಕಣಕ್ಕಿಳಿದಿದ್ದ ರಾಹುಲ್​ ಗಾಂಧಿ 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.

ನವದೆಹಲಿ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಎರಡು ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ವದು, ವಯನಾಡು ಮತ್ತು ರಾಯ್​ ಬರೇಲಿ ಕಣಕ್ಕಿಳಿದಿದ್ದ ರಾಹುಲ್​ ಗಾಂಧಿ 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.

ಕೇರಳದ ವಯನಾಡಿನಲ್ಲಿ ರಾಹುಲ್​ ಗಾಂಧಿಯವರು 530498 ಮತಗಳು ಪಡೆದಿದ್ದಾರೆ. ಕಮ್ಯೂನಿಸ್ಟ್​ ಪಾರ್ಟಿ ಆಫ್​ ಇಂಡಿಯಾದ ಅನ್ನಿ ರಾಜ ಅವರು 239460 ವೋಟ್​ ತೆಗೆದುಕೊಂಡಿದ್ದಾರೆ. ಬಿಜೆಪಿಯ ಕೆ. ಸುರೇಂದ್ರನ್​​ ಅವರು 1 ಲಕ್ಷ ಮತ ಗಳಿಸಿದ್ದಾರೆ.

ಇನ್ನೊಂದೆಡೆ ರಾಯ್​ ಬರೇಲಿಯಲ್ಲಿ ರಾಹುಲ್​ ಗಾಂಧಿಗೆ 382467 ಮತಗಳು ಲಭಿಸಿವೆ. ಬಿಜೆಪಿ ಅಭ್ಯರ್ಥಿ ದಿನೇಶ್​ ಪ್ರತಾಪ್​ ಸಿಂಗ್​​ ಅವರು 170104 ಮತ ಪಡೆದುಕೊಂಡಿದ್ದಾರೆ.

ಕಳೆದ ಸಲ ರಾಹುಲ್​ ಅಮೇಥಿ ಹಾಗೂ ವಯನಾಡಿನಲ್ಲಿ ಸ್ಪರ್ಧಿಸಿದ್ದರು. ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋತರೂ ರಾಹುಲ್​ ಗಾಂಧಿ ಅವರನ್ನು ಕೇರಳದ ವಯನಾಡಿನ ಜನ ಗೆಲ್ಲಿಸಿದ್ದರು.

 

Ad
Ad
Nk Channel Final 21 09 2023
Ad