Ad

ವಯನಾಡು ಭೂಕುಸಿತಕ್ಕೆ ಗೋ ಹತ್ಯೆ ಚಟುವಟಿಕೆ ಕಾರಣ: ಜ್ಞಾನದೇವ್ ಅಹುಜಾ

ಭೀಕರ ಭೂಕುಸಿತಕ್ಕೆ ರಾಜಸ್ಥಾನದ ಬಿಜೆಪಿ ನಾಯಕರೊಬ್ಬರು ನೀಡಿರುವ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ವಯನಾಡು: ಭೀಕರ ಭೂಕುಸಿತಕ್ಕೆ ರಾಜಸ್ಥಾನದ ಬಿಜೆಪಿ ನಾಯಕರೊಬ್ಬರು ನೀಡಿರುವ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಬಿಜೆಪಿ ಮಾಜಿ ಸಂಸದರೂ ಆಗಿರುವ ನಾಯಕ ಜ್ಞಾನದೇವ್ ಅಹುಜಾ, ವಯನಾಡು ದುರಂತಕ್ಕೆ ಕೇರಳದಲ್ಲಿನ ಗೋ ಹತ್ಯೆ ಚಟುವಟಿಕೆಗಳು ಕಾರಣ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಎಲ್ಲೆಲ್ಲಿ ಗೋಹತ್ಯೆಗಳು ನಡೆಯುತ್ತವೆಯೋ, ಅಂತಹ ಸ್ಥಳಗಳಲ್ಲಿ ಈ ರೀತಿಯ ಘಟನೆಗಳು ನಡೆಯುವುದು ಮುಂದುವರಿಯುತ್ತದೆ ಎಂದು ಭವಿಷ್ಯವನ್ನೂ ನುಡಿದಿದ್ದಾರೆ.

ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶಗಳಂತಹ ಭಾಗಗಳಲ್ಲಿ ಕೂಡ ಮೇಘ ಸ್ಫೋಟ ಹಾಗೂ ಭೂ ಕುಸಿತದಂತಹ ನೈಸರ್ಗಿಕ ವಿಕೋಪಗಳು ಪದೇ ಪದೇ ಸಂಭವಿಸುತ್ತಲೇ ಇರುತ್ತವೆ. ಆದರೆ ಕೇರಳದಲ್ಲಿ ಸಂಭವಿಸಿದ ಘಟನೆಯಷ್ಟು ವಿನಾಶಕಾರಿ ಪರಿಣಾಮ ಅವು ಉಂಟುಮಾಡುವುದಿಲ್ಲ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

 

 

Ad
Ad
Nk Channel Final 21 09 2023