ದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಹು ನಿರೀಕ್ಷಿತ ವಕ್ಫ್ ಮಂಡಳಿ ಕಾನೂನು ತಿದ್ದುಪಡಿ ಮಸೂದೆಯನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಾಯಿತು. ಇದಕ್ಕೆ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ನಾವು ಈ ಮಸೂದೆಯನ್ನು ವಿರೋಧಿಸುತ್ತೇವೆ, ಜನರು ವಕ್ಫ್ ಮಂಡಳಿಗೆ ಸ್ವಿಚ್ಛೆಯಿಂದ ದಾನವಾಗಿ ನೀಡುತ್ತಿದ್ದಾರೆ. ಧಾರ್ಮಿಕ ಸಂಸ್ಥೆಗಳಿಗೆ ಸ್ಥಿರ ಹಾಗೂ ಚರಾಸ್ಥಿ ನೀಡುವ ಅಧಿಕಾರ ಇದೆ.
ಮುಸ್ಲಿಂಮೇತರರು ಈ ಸಂಸ್ಥೆಯ ಭಾಗವಾಗಿರಲು ಹೇಗೆ ಸಾಧ್ಯ, ಸುಪ್ರೀಂಕೋರ್ಟ್ ಅಯೋಧ್ಯಾ ಕಮಿಟಿ ರಚನೆ ಮಾಡಿತ್ತು ಬೇರೆ ಧರ್ಮದವರು ಈ ಕಮಿಟಿಯಲ್ಲಿ ಇರಲು ಸಾಧ್ಯವಿದೆಯೇ? ಎಂದು ಪ್ರಶ್ನಿಸಿದ್ದಾರೆ.
Ad