Bengaluru 26°C
Ad

ರಾಜಕೀಯದಿಂದ ಹಿಂದೆ ಸರಿಯಲು ನಿರ್ಧರಿಸಿದ ವಿ.ಕೆ.ಪಾಂಡಿಯನ್

ಮಾಜಿ ಅಧಿಕಾರಿ ಮತ್ತು ಬಿಜೆಡಿ ನಾಯಕ ವಿ.ಕೆ.ಪಾಂಡಿಯನ್ ಸಕ್ರಿಯ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ.

ನವದೆಹಲಿ: ಮಾಜಿ ಅಧಿಕಾರಿ ಮತ್ತು ಬಿಜೆಡಿ ನಾಯಕ ವಿ.ಕೆ.ಪಾಂಡಿಯನ್ ಸಕ್ರಿಯ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ.

ಈಗ ನಾನು ಸಕ್ರಿಯ ರಾಜಕೀಯದಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ಇಷ್ಟು ವರ್ಷಗಳ ರಾಜಕೀಯ ಪ್ರಯಾಣದಲ್ಲಿ ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ. ಇದಕ್ಕಾಗಿ ಪಕ್ಷದ ಎಲ್ಲಾ ಕಾರ್ಯಕರ್ತರು ಸೇರಿದಂತೆ ಇಡೀ ಬಿಜು ಪರಿವಾರದ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ರಾಜಕೀಯಕ್ಕೆ ಸೇರುವ ನನ್ನ ಉದ್ದೇಶವು ನವೀನ್ ಬಾಬುಗೆ ಸಹಾಯ ಮಾಡುವುದಾಗಿತ್ತು. ಈಗ ನಾನು ಪ್ರಜ್ಞಾಪೂರ್ವಕವಾಗಿ ಸಕ್ರಿಯ ರಾಜಕೀಯದಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ ಎಂದು ಮಾಜಿ ಅಧಿಕಾರಿ ಪಾಂಡಿಯನ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಬಿಜು ಜನತಾ ದಳ ಮುಖಭಂಗ ಅನುಭವಿಸಿದ ನಂತರ ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಆಪ್ತ ವಿಕೆ ಪಾಂಡಿಯನ್ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ.

 

Ad
Ad
Nk Channel Final 21 09 2023
Ad