Bengaluru 28°C
Ad

ಹರಿಯಾಣ ವಿಧಾನಸಭೆ ಚುನಾವಣೆ : ವಿನೇಶ್ ಫೋಗಟ್ ನಾಮಪತ್ರ ಸಲ್ಲಿಕೆ

ಹರಿಯಾಣ ವಿಧಾನಸಭೆ ಚುನಾವಣಾ ರಂಗೇರುತ್ತಿದ್ದು, ಕುಸ್ತಿಪಟು-ರಾಜಕಾರಣಿ ವಿನೇಶ್ ಫೋಗಟ್ ಅವರು ಬುಧವಾರ ಜಿಂದ್ ಜಿಲ್ಲೆಯ ಜೂಲಾನಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಚಂಡೀಗಢ: ಹರಿಯಾಣ ವಿಧಾನಸಭೆ ಚುನಾವಣಾ ರಂಗೇರುತ್ತಿದ್ದು, ಕುಸ್ತಿಪಟು-ರಾಜಕಾರಣಿ ವಿನೇಶ್ ಫೋಗಟ್ ಅವರು ಬುಧವಾರ ಜಿಂದ್ ಜಿಲ್ಲೆಯ ಜೂಲಾನಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್ ನಾಯಕ ಮತ್ತು ರೋಹ್ಟಕ್ ಸಂಸದ ದೀಪೇಂದರ್ ಸಿಂಗ್ ಹೂಡಾ ಮತ್ತು ಸೋನಿಪತ್ ಸಂಸದ ಸತ್ಪಾಲ್ ಬ್ರಹ್ಮಚಾರಿ ಅವರು ವಿನೇಶ್ ಫೋಗಟ್ ಅವರಿಗೆ ಸಾಥ್ ನೀಡಿದರು.

ವಿನೇಶ್ ಫೋಗಟ್ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೀಪೇಂದರ್ ಹೂಡಾ ಅವರು, ಫೋಗಟ್ ಪಕ್ಷಕ್ಕೆ “ದೊಡ್ಡ ಗೆಲುವು” ನೀಡಲಿದ್ದಾರೆ ಮತ್ತು ಜುಲಾನಾದಲ್ಲಿ ಮಾತ್ರವಲ್ಲ, ಭೂಪಿಂದರ್ ಸಿಂಗ್ ಹೂಡಾ ನೇತೃತ್ವದಲ್ಲಿ ಹರಿಯಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Ad
Ad
Nk Channel Final 21 09 2023