ಕೊಲ್ಕತ್ತಾ: ಆರ್.ಜಿ. ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದ್ದ ಟ್ರೈನಿ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರಿಯಾ ತನಿಖಾ ದಳ (CBI) ತನಿಖೆಯನ್ನು ಚುರುಕುಗೊಳಿಸಿದ್ದು, ನ್ಯಾಯಾಲಯವು ಆರೋಪಿಯ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.
ಇತ್ತ ಸಿಬಿಐ ಅಧಿಕಾರಿಗಳು ತನಿಖೆಯ ಆಳಕ್ಕೆ ಇಳಿಯುತ್ತಿದ್ದಂತೆ ಆರೋಪಿಯ ಕರಾಳ ಕೃತ್ಯ ಒಂದೊಂದೇ ಬೆಳಕಿಗೆ ಬರುತ್ತಿದ್ದು, ಇದೀಗ ಆತನ ಹೇಯ ಕೃತ್ಯವೊಂದು ಜಗಜ್ಜಾಹೀರಾಗಿದೆ.
ತನಿಖೆಯ ಭಾಗವಾಗಿ ಆರೋಪಿಯ ಫೋನ್ ವಶಕ್ಕೆ ಪಡೆದಿರುವ ಅಧಿಕಾರಿಗಳು ಅದರಲ್ಲಿರುವ ಡೇಟಾವನ್ನು ರಿಟ್ರೀವ್ ಮಾಡುತ್ತಿದ್ದಾರೆ. ರಿಟ್ರೀವ್ ಆಗಿರುವ ಡೇಟಾ ಪರಿಶೀಲಿಸಿದಾಗ ಸಿಬಿಐ ಅಧಿಕಾರಿಗಳು ದಂಗಾಗಿದ್ದು, ಆರೋಪಿಯು ಶವವಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿರುವ ವಿಡಿಯೋಗಳು ಕಂಡು ಬಂದಿದ್ದು, ಈತನ ಹೇಯ ಕೃತ್ಯ ಮತ್ತಷ್ಟು ಬಯಲಾಗಿದೆ.
ಆರೋಪಿ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗುವ ಮೊದಲು ರೆಡ್ಲೈಟ್ ಏರಿಯಾಗೆ ತೆರಳಿದ್ದ ಎಂದು ವರದಿಯಾಗಿದೆ. ಇದಾದ ಬಳಿಕ ಆತ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.