ಪ್ಯಾರಿಸ್: ಭಾರತ ಮತ್ತು ಗ್ರೇಟ್ ಬ್ರಿಟನ್ ನಡುವಿನ ಹಾಕಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. ಈ ಮಹತ್ವದ ಗೆಲುವಿನೊಂದಿಗೆ ಭಾರತವು ಒಲಿಂಪಿಕ್ಸ್ ಕೂಟದ ಸೆಮಿ ಫೈನಲ್ ಗೆ ಎಂಟ್ರಿ ಪಡೆದಿದೆ.
ಪಂದ್ಯವು 1-1ರಿಂದ ಸಮನಾದ ಬಳಿಕ ಫಲಿತಾಂಶಕ್ಕಾಗಿ ಶೂಟೌಟ್ ಮೊರೆ ಹೋಗಲಾಯಿತು. ಕೊನೆಯ ಒಲಿಂಪಿಕ್ ಆಡುತ್ತಿರುವ ಭಾರತದ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಪೆನಾಲ್ಟಿ ಶೂಟೌಟ್‌ನಲ್ಲಿ ಹೀರೋ ಆದರು. ಭಾರತವು ಶೂಟೌಟ್‌ನಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿ ಸತತ ಎರಡನೇ ಒಲಿಂಪಿಕ್ ಸೆಮಿ ಫೈನಲ್ ಪ್ರವೇಶ ಮಾಡಿತು.
Ad