Bengaluru 27°C
Ad

19 ಕಡೆ ಬಾಂಬ್ ಇಟ್ಟಿದ್ದೆವು ಆದರೆ ಯಾವುದೇ ಬ್ಲ್ಯಾಸ್ಟ್ ಆಗಿಲ್ಲ ಎಂದ ಉಲ್ಫಾ ಇಂಡಿಪೆಂಡೆಂಟ್ !

Bombs

ಗುವಾಹಟಿ: ಸ್ವಾತಂತ್ರ್ಯ ದಿನಾಚರಣೆ ವೇಳೆ ಅಸ್ಸಾಂನ 19 ಕಡೆಗಳಲ್ಲಿ ಬಾಂಬ್ ಇಟ್ಟಿದ್ದು ಟೆಕ್ನಿಕಲ್ ಕಾರಣದಿಂದಾಗಿ ಅವುಗಳು ಬ್ಲ್ಯಾಸ್ಟ್ ಆಗಿಲ್ಲ ಎಂದು ಅಸ್ಸಾಂನ ದಂಗೆಕೋರ ಗುಂಪು ಉಲ್ಫಾ ಇಂಡಿಪೆಂಡೆಂಟ್ ಪ್ರಕಟಣೆಯಲ್ಲಿ ತಿಳಿಸಿದೆ.

Ad

ಸ್ವಾತಂತ್ರ್ಯ ದಿನಾಚರಣೆಯ ಬಹಿಷ್ಕಾರಕ್ಕೆ ಉಲ್ಫಾ–ಐ ಕರೆ ನೀಡಿತ್ತು. ಅಲ್ಲದೆ ಪ್ರತಿಭಟನೆಗಾಗಿ ರಾಜ್ಯ ರಾಜಧಾನಿ ಗುವಾಹಟಿಯ 8 ಪ್ರದೇಶಗಳು ಸೇರಿದಂತೆ 19 ಸ್ಥಳಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಬೆಳಿಗ್ಗೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಅದು ತಿಳಿಸಿದೆ.

Ad

ಬಾಂಬ್ ಇರಿಸಲಾಗಿರುವ ಕೆಲವು ಪ್ರದೇಶಗಳ ಚಿತ್ರಗಳನ್ನೂ ನಿಷೇಧಿತ ಸಂಘಟನೆ ಹಂಚಿಕೊಂಡಿದೆ. ಅದರಲ್ಲಿ ಒಂದು ಪ್ರದೇಶವು ರಾಜಧಾನಿ ಗುವಾಹಟಿಯ ದಿಸ್ಪುರ್‌ನ ಸರ್ಕಾರಿ ಕಾರ್ಯಾಲಯಗಳ ಬಳಿ ಇದೆ. ಅಲ್ಲದೆ, ಬಾಂಬ್‌ಗಳನ್ನು ತೆಗೆಯುವವರೆಗೂ ಅಥವಾ ನಿಷ್ಕ್ರಿಯಗೊಳಿಸುವವರೆಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆಯೂ ಸಂಘಟನೆ ತಿಳಿಸಿದೆ.

Ad
Ad
Ad
Nk Channel Final 21 09 2023