ಮಧ್ಯಪ್ರದೇಶ: ರೈಲಿನ ಬೋಗಿ ಕೆಳಭಾಗದಲ್ಲಿ, ಚಕ್ರಗಳ ನಡುವೆ ಅಡಗಿ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಮಧ್ಯಪ್ರದೇಶದ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಜಬಲ್ಪುರದ ರೈಲ್ವೆ ನಿಲ್ದಾಣದಲ್ಲಿನ ಸಿಬ್ಬಂದಿ ದಾನಾಪುರ್ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳ ತಪಾಸಣೆ ನಡೆಸುವ ವೇಳೆ, ಬೋಗಿಯಡಿ ಇರುವ ಟ್ರಾಲಿಯಲ್ಲಿ ವ್ಯಕ್ತಿಯೊಬ್ಬ ಮಲಗಿರುವುದು ಕಂಡುಬಂದಿದೆ. ಬಳಿಕ ಆತನ ವಿಚಾರಣೆ ನಡೆಸಿದಾಗ, ಜಬಲ್ಪುರದಿಂದ ಸುಮಾರು 290 ಕಿ.ಮೀ. ದೂರದಿಂದ ಪ್ರಯಾಣಿಸಿದ್ದಾಗಿ ಬಾಯ್ದಿಟ್ಟಿದ್ದಾನೆ.