Bengaluru 22°C
Ad

ತಿರುಪತಿ ಲಡ್ಡು ಅಪವಿತ್ರ: ಡಿಸಿಎಂ ಪವನ್​ ಕಲ್ಯಾಣ್ ಮೊದಲ ಪ್ರತಿಕ್ರಿಯೆ!

ದೇಶದಲ್ಲಿನ ಎಲ್ಲಾ ದೇವಾಲಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಲು ರಾಷ್ಟ್ರೀಯ ಮಟ್ಟದಲ್ಲಿ ‘ಸನಾತನ ಧರ್ಮ ರಕ್ಷಣಾ ಮಂಡಳಿ’ ಸ್ಥಾಪಿಸಬೇಕಾಗಿದೆ ಎಂದು ಆಂಧ್ರಪ್ರದೇಶದ ಡಿಸಿಎಂ ಪವನ್​ ಕಲ್ಯಾಣ್ ಅವರು ಹೇಳಿದ್ದಾರೆ.

ಹೈದರಾಬಾದ್: ದೇಶದಲ್ಲಿನ ಎಲ್ಲಾ ದೇವಾಲಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಲು ರಾಷ್ಟ್ರೀಯ ಮಟ್ಟದಲ್ಲಿ ‘ಸನಾತನ ಧರ್ಮ ರಕ್ಷಣಾ ಮಂಡಳಿ’ ಸ್ಥಾಪಿಸಬೇಕಾಗಿದೆ ಎಂದು ಆಂಧ್ರಪ್ರದೇಶದ ಡಿಸಿಎಂ ಪವನ್​ ಕಲ್ಯಾಣ್ ಅವರು ಹೇಳಿದ್ದಾರೆ.

ತಿರುಪತಿ ತಿರುಮಲ ಲಡ್ಡುಗಳಲ್ಲಿ ಪ್ರಾಣಿಯ ಕೊಬ್ಬು ಬಳಕೆಗೆ ಸಂಬಂಧ ಪಟ್ಟಂತೆ ಇದೇ ಮೊದಲ ಬಾರಿಗೆ ಡಿಸಿಎಂ ಪವನ್​ ಕಲ್ಯಾಣ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ದೇಶದಲ್ಲಿನ ದೇವಾಲಯಗಳ ಸಮಸ್ಯೆಗಳನ್ನು ಪರಿಶೀಲಿಸಲು ರಾಷ್ಟ್ರ ಮಟ್ಟದಲ್ಲಿ ರಕ್ಷಣಾ ಮಂಡಳಿಯನ್ನು ಸ್ಥಾಪಿಸುವ ಸಮಯ ಬಂದಿದೆ. ದೇಶಾದ್ಯಂತ ಅನ್ವಯ ಆಗುವಂತೆ ಧರ್ಮ ರಕ್ಷಣಾ ಬೋರ್ಡ್ ರಚಿಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.

ಈ ಸಂಬಂಧ ರಾಷ್ಟ್ರೀಯ ಮಟ್ಟದಲ್ಲಿ ಎಲ್ಲ ನೀತಿ ನಿರೂಪಕರು, ನ್ಯಾಯಾಂಗ, ಧಾರ್ಮಿಕ ಮುಖ್ಯಸ್ಥರು, ನಾಗರಿಕರು ಅವರವರ ಕ್ಷೇತ್ರಗಳಲ್ಲಿ ಚರ್ಚೆ ನಡೆಸಬೇಕಿದೆ. ತಿರುಪತಿ ತಿರುಮಲ ಲಡ್ಡುಗಳಲ್ಲಿ ಪ್ರಾಣಿಯ ಕೊಬ್ಬು ಬಳಕೆ ಮಾಡಿರುವ ಬಗ್ಗೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ. ಇದು ದೇವಾಲಯಗಳ ಅಪವಿತ್ರತೆ ಹಾಗೂ ಇತರ ಧಾರ್ವಿುಕ ಆಚರಣೆಗಳ ಸುತ್ತಲಿನ ಅನೇಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿದೆ ಎಂದು ಹೇಳಿದ್ದಾರೆ.

https://x.com/PawanKalyan/status/1836965008908996961?

Ad
Ad
Nk Channel Final 21 09 2023