Bengaluru 23°C
Ad

ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ಮೋದಿಗೆ ಪತ್ರ ಬರೆದ ಜಗನ್

ತಿರುಪತಿ ಲಡ್ಡು ಪ್ರಸಾದಕ್ಕೆ ದನದ ಕೊಬ್ಬು ಕಲಬೆರಕೆ ಪ್ರಕರಣ ಸಂಬಂಧ ಆಂಧ್ರದ ಮಾಜಿ ಸಿಎಂ ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈಎಸ್‌ ಜಗನ್‌ ಮೋಹನ್‌ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ನವದೆಹಲಿ : ತಿರುಪತಿ ಲಡ್ಡು ಪ್ರಸಾದಕ್ಕೆ ದನದ ಕೊಬ್ಬು ಕಲಬೆರಕೆ ಪ್ರಕರಣ ಸಂಬಂಧ ಆಂಧ್ರದ ಮಾಜಿ ಸಿಎಂ ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈಎಸ್‌ ಜಗನ್‌ ಮೋಹನ್‌ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಲಡ್ಡು ಪ್ರಸಾದಕ್ಕೆ ಸಂಬಂಧಿಸಿ ಸಿಎಂ ಚಂದ್ರಬಾಬು ನಾಯ್ಡು ಮಾಡಿರುವ ಆಧಾರರಹಿತ ಆರೋಪಗಳ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಚಂದ್ರಬಾಬು ನಾಯ್ಡು ಓರ್ವ ರೋಗಗ್ರಸ್ತ ಮತ್ತು ಸುಳ್ಳುಗಾರ, ಕೇವಲ ರಾಜಕೀಯ ಉದ್ದೇಶಗಳಿಗಾಗಿ ಕೋಟ್ಯಂತರ ಜನರ ನಂಬಿಕೆಗಳನ್ನು ಗಂಭೀರವಾಗಿ ಘಾಸಿಗೊಳಿಸುವಷ್ಟು ಕೆಳಮಟ್ಟಕ್ಕೆ ಇಳಿದಿದ್ದಾರೆ.

ನಾಚಿಕೆಯಿಲ್ಲದೇ ಸುಳ್ಳನ್ನು ಹರಡುತ್ತಿರುವ ಅವರ ಕೃತ್ಯಕ್ಕೆ ಅವರನ್ನು ತೀವ್ರವಾಗಿ ಖಂಡಿಸುವುದು ಅತ್ಯಗತ್ಯವಿದೆ. ವಾಸ್ತವಾಂಶ ಬೆಳಕಿಗೆ ತರಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ. ಲಡ್ಡು ಪ್ರಸಾದದಲ್ಲಿ ಪ್ರಾಣಿಯ ಕೊಬ್ಬು ಬೆರೆಸಲಾಗಿದೆ ಎಂಬ ನಾಯ್ಡು ಆರೋಪದಿಂದ ಕೋಟ್ಯಂತರ ಹಿಂದೂ ಭಕ್ತರ ಮನಸ್ಸಿನಲ್ಲಿ ಅನುಮಾನಗಳನ್ನು ಸೃಷ್ಟಿಯಾಗಿದೆ. ಟಿಟಿಡಿಯ ಪಾವಿತ್ರ್ಯತೆಯ ಮೇಲಿನ ನಂಬಿಕೆಯನ್ನು ಪುನಃಸ್ಥಾಪಿಸಬೇಕು ಎಂದು ಪ್ರಧಾನಿಯವರಿಗೆ ಜಗನ್ ಪತ್ರದ ಮೂಲಕ ಮನವಿ ಮಾಡಿದ್ದಾರೆ.

https://x.com/ANI/status/1837776032167788640?

Ad
Ad
Nk Channel Final 21 09 2023