ಕಾಸರಗೋಡು: ರೈಲು ಬಡಿದು ಮೂವರು ಮಹಿಳೆಯರು ಮೃತಪಟ್ಟ ದಾರುಣ ಘಟನೆ ಶನಿವಾರ ಸಂಜೆ ಕಾಞ೦ಗಾಡ್ ರೈಲ್ವೆ ನಿಲ್ದಾಣ ಪರಿಸರದಲ್ಲಿ ನಡೆದಿದೆ.ಮೃತಪಟ್ಟವರು ಕೊಟ್ಟಾಯಂ ನಿವಾಸಿಗಳಾಗಿದ್ದಾರೆ. ಚಿನ್ನಮ್ಮ ( 70) , ಏಂಜೆಲ್ ( 30)ಮತ್ತು ಆಲಿಸ್ ಥೋಮಸ್ ( 60) ಮೃತಪಟ್ಟವರು. ಕೊಟ್ಟಾಯಂ ಚಿಂಗಾವನ ಎಂಬಲ್ಲಿಂದ ರಾಜಾಪುರ ಕಲ್ಲಾರಿನ ಸಂಬಂಧಿಕರ ಮನೆಯಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಬರುತ್ತಿದ್ದಾಗ ಘಟನೆ ನಡೆದಿದೆ.
ಸಂಜೆ 7. 30 ರ ಸುಮಾರಿಗೆ ಮಲಬಾರ್ ಎಕ್ಸ್ ಪ್ರೆಸ್ ರೈಲಿನಲ್ಲಿ ತೆರಳಲು ರೈಲ್ವೆ ನಿಲ್ದಾಣಕ್ಕೆ ತಲುಪಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಹಳಿ ದಾಟುತ್ತಿದ್ದಾಗ ಮಂಗಳೂರು ಕಡೆಗೆ ತೆರಳುತ್ತಿದ್ದ ಸರಕು ಲಾರಿ ಬಡಿದು ಘಟನೆ ನಡೆದಿದೆ. ಹೊಸದುರ್ಗ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿದರು.
Ad