Bengaluru 22°C
Ad

ದೇಶದ ಎಲ್ಲಾ ರಾಜ್ಯಗಳಲ್ಲೂ ಕಳ್ಳತನ, ದರೋಡೆ ಮಾಡಿದ ಆರೋಪಿ ಪೊಲೀಸರ ವಶಕ್ಕೆ

ಹಲವು ರಾಜ್ಯಗಳಲ್ಲಿ ಸರಣಿ ಕಳ್ಳತನ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಳ್ಳನನ್ನು ಗುಜರಾತ್ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಗುಜರಾತ್ : ಹಲವು ರಾಜ್ಯಗಳಲ್ಲಿ ಸರಣಿ ಕಳ್ಳತನ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಳ್ಳನನ್ನು ಗುಜರಾತ್ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

Ad
300x250 2

ರೋಹಿತ್ ಕನುಭಾಯಿ ಸೋಲಂಕಿ ಬಂಧಿತ ಆರೋಪಿ. ವಾಪಿ ಸಿಟಿಯಲ್ಲಿ ನಡೆದ ಒಂದು ಲಕ್ಷ ರೂಪಾಯಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ಪೊಲೀಸರು ಬಂಧಿಸಿದ್ದರು. ತೀವ್ರ ತನಿಖೆ ನಡೆಸಿದ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಈತ ಲಕ್ಷುರಿ ಲೈಫ್. ಜೊತೆಗೆ 19 ದರೋಡೆ ಕೇಸ್​ನಲ್ಲಿ ಭಾಗಿಯಾಗಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ.

ತನಿಖೆ ವೇಳೆ ಗೊತ್ತಾಗಿರುವ ಪ್ರಮುಖ ವಿಚಾರ ಏನೆಂದರೆ ಈತ ಅದ್ದೂರಿ ಮನೆಯೊಂದನ್ನು ಖರೀದಿಸಿದ್ದಾನೆ. ಮುಂಬೈನ ಮುಂಬ್ರಾ ಪ್ರದೇಶದಲ್ಲಿರುವ ಮನೆಯ ಒಟ್ಟು ಮೌಲ್ಯ ಸುಮಾರು ಒಂದು ಕೋಟಿಗೂ ಹೆಚ್ಚು. ಜೊತೆಗೆ ಒಂದು ಆಡಿ ಕಾರನ್ನೂ ಕೂಡ ಹೊಂದಿದ್ದಾನೆ.

ವಲ್ಸದ್​​​ನಲ್ಲಿ ಮೂರು, ಸೂರತ್, ಪೊರಬಂದರ್, ಸೆಲ್ವಾಲ್ ಹಾಗೂ ಮಹಾರಾಷ್ಟ್ರದ​ಲ್ಲಿ ತಲಾ ಒಂದು, ತೆಲಂಗಾಣ, ಆಂಧ್ರಪ್ರದೇಶ, ಮಧ್ಯಪ್ರದೇಶದಲ್ಲಿ ತಲಾ ಎರಡು ಕಡೆಗಳಲ್ಲಿ ರಾಬರಿ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ಜೊತೆಗೆ ಆರಕ್ಕೂ ಹೆಚ್ಚು ಕಡೆ ಕಳ್ಳತನ ಮಾಡಿರೋದಾಗಿ ಹೇಳಿದ್ದಾನೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಲಂಚ ಪಡೆದಿರುವ ಬಗ್ಗೆಯೂ ಹೇಳಿದ್ದಾನೆ.

ಈತನ ಕ್ರಿಮಿನಲ್ ಚಟುವಟಿಕೆಗಳು ವಿವಿಧ ರಾಜ್ಯಗಳಲ್ಲಿ ನಡೆಯುತ್ತಿದ್ದವು. ಶ್ರೀಮಂತ ಹೋಟೆಲ್​​ಗಳಲ್ಲಿ ಉಳಿದುಕೊಂಡು ಕಳ್ಳತನ ಮಾಡುತ್ತಿದ್ದ. ಬಸ್​​ಗಳಲ್ಲಿ ಪ್ರಯಾಣ ಮಾಡುತ್ತಿರಲಿಲ್ಲ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗಲು ಫ್ಲೈಟ್​ಗಳನ್ನು ಬುಕ್ ಮಾಡಿಕೊಳ್ಳುತ್ತಿದ್ದ. ವಿಮಾನ ನಿಲ್ದಾಣದಿಂದ ಹೋಟೆಲ್​ಗೆ ತಲುಪಲು ಹೋಟೆಲ್​ ಕ್ಯಾಬ್​​ಗಳನ್ನೇ ಬಳಸಿಕೊಳ್ಳುತ್ತಿದ್ದ. ವಿವಿಧ ಪಾರ್ಟಿಗಳಲ್ಲಿ ಭಾಗಿಯಾಗಿ ಎಂಜಾಯ್ ಮಾಡ್ತಿದ್ದ. ಮುಂಬೈನ ನೈಟ್​ಕ್ಲಬ್, ಬಾರ್​​ಗಳಲ್ಲಿ ಪಾರ್ಟಿ ಮಾಡಿ ಡ್ಯಾನ್ಸ್​ ಮಾಡ್ತಿದ್ದ. ಡ್ರಗ್​ ವ್ಯಸನಿಯಾಗಿದ್ದ ಈತ, ಪ್ರತಿ ತಿಂಗಳು ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Ad
Ad
Nk Channel Final 21 09 2023
Ad