Bengaluru 27°C

ಕೇರಳದ ಭೀಕರ ದುರಂತಕ್ಕೆ ಗರ್ಭಿಣಿ ಆನೆ ಹತ್ಯಾದೋಷವೇ ಕಾರಣನಾ?

Kerla

ವಯನಾಡ್: ಕೇರಳದ ಭೀಕರ ಭೂಕುಸಿತಕ್ಕೆ ನೂರಾರು ಆಯಾಮಗಳು ಹುಟ್ಟಿಕೊಳ್ಳುತ್ತಿವೆ. ಹಿಂದೆಂದೂ ಕಂಡು ಕೇಳರಿಯದ ಈ ಭೂಕುಸಿತದ ಬಗ್ಗೆ ಈಗಾಗಲೇ ಹಲವಾರು ಚರ್ಚೆಗಳಾಗಿವೆ. ಇದೊಂದು ಅಪ್ಪಟ ಶಾಪ, ನರಳಿ ನರಳಿ ಪ್ರಾಣ ಬಿಟ್ಟ ಜೀವಿಗಳ ಶಾಪ ಎಂದೇ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.


ಕೇರಳಕ್ಕೂ ಆನೆಗಳು ಒಂದು ಎಂದೂ ಬಿಡಿಸಲಾಗದ ನಂಟಿದೆ. ಆನೆಗಳು ಅಂದ್ರೆ ಕೇರಳಕ್ಕೆ ಕೇವಲ ಒಂದು ಪ್ರಾಣಿಯಾಗಿಯೋ ಗಣಪನ ರೂಪವಾಗಿಯೋ ಉಳಿದಕೊಂಡಿಲ್ಲ. ಅದೊಂದು ಈ ನೆಲದಲ್ಲಿ ಬೇರೆಯದ್ದೇ ಪೂಜ್ಯನೀಯ ಸ್ಥಾನವನ್ನು ಪಡೆದುಕೊಂಡಿದೆ. ಹೀಗಾಗಿ ನಾಲ್ಕು ವರ್ಷದ ಹಿಂದೆ ಇದೇ ಮಲ್ಲಪ್ಪುರಂನಲ್ಲಿ ಗರ್ಭಿಣಿ ಆನೆಯೊಂದನ್ನ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಪೈನಾಪಲ್​ನಲ್ಲಿ ಸ್ಫೋಟಕ ವಸ್ತುಗಳನ್ನಿಟ್ಟು ಆನೆಯನ್ನು ರಣಭೀಕರವಾಗಿ ಕೊಲ್ಲಲಾಗಿತ್ತು.


ಸ್ಫೋಟದ ತೀವ್ರತೆ ಹಾಗೂ ಆನೆಯ ಸತ್ತ ವಿಚಾರವನ್ನು ಅಲ್ಲಿನ ಅರಣ್ಯ ಇಲಾಖೆಯ ಅಧಿಕಾರಿ ಬಿಚ್ಚಿಟ್ಟಿದ್ದರು.ತೀವ್ರವಾಗಿ ಗಾಯಗೊಂಡ ಆನೆ ನದಿಯ ಪಕ್ಕದಲ್ಲಿ ಅನಾಥ ಹೆಣವಾಗಿ ಬಿದ್ದು ಹೋಗಿತ್ತು. ಅದರ ಶಾಪದ ಪರಿಣಾಮವೇ ಇಂದು ಈ ಭೂಕುಸಿತಕ್ಕೆ ಕಾರಣ ಅನ್ನೋ ಮಾತುಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿವೆ. ಅಷ್ಟೇ ಅಲ್ಲದೇ ಇಲ್ಲಿ ಹಲವು ಪ್ರಾಣಿಗಳನ್ನು ಭೀಕರವಾಗಿ ಹತ್ಯೆ ಗೈಯಲಾಗಿದೆ.


ಇನ್ನು ಕೆಲವರು ಬೇರೆಯದ್ದೇ ವಾದನ್ನು ಮಾಡುತ್ತಿದ್ದಾರೆ. ಆ ಘಟನೆ ನಡೆದಿದ್ದೇ ಬೇರೆ ಜಿಲ್ಲೆಯಲ್ಲಿ, ಗುಡ್ಡ ಕುಸಿತ ಆಗಿದ್ದೇ ಬೇರೆ ಜಿಲ್ಲೆಯಲ್ಲಿ ಅದಕ್ಕೂ ಇದಕ್ಕೂ ಏನು ಸಂಬಂಧ ಅನ್ನೋ ವಾದಗಳು ಕೂಡ ಕೇಳಿ ಬರುತ್ತಿವೆ.


Nk Channel Final 21 09 2023