ಲಕ್ನೋ: ಹೆಂಡತಿ ತವರು ಮನೆಗೆ ಹೋಗುತ್ತೇನೆ ಎಂದು ಹೇಳಿದ್ದಕ್ಕೆ ಹೆಂಡತಿಯ ಮೂಗು ಕತ್ತರಿಸಿ ವಿಕೃತ ಮರೆದಿರುವ ಘಟನೆ ಉತ್ತರಪ್ರದೇಶದ ಹಾರ್ಡೋಯಿ ಜಿಲ್ಲೆಯಲ್ಲಿ ಇಂತಹದೊಂದು ವಿಚಿತ್ರ ಘಟನೆ ನಡೆದಿದೆ.
ಕಳೆದ ಭಾನುವಾರ ಮಹಿಳೆಯೊಬ್ಬರು ನಾಳೆ ರಕ್ಷಾಬಂಧನ ಹಬ್ಬ ಇದೆ. ನಾನು ನನ್ನ ತವರು ಮನೆಗೆ ಹೋಗಿ ನನ್ನ ಅಣ್ಣಂದಿರಿಗೆ ರಾಖಿ ಕಟ್ಟಿ ಬರುತ್ತೇನೆ ಎಂದು ಕೇಳಿದ್ದಾಳೆ. ಇಷ್ಟಕ್ಕೆ ಕೋಪಗೊಂಡ ಗಂಡ ಹೆಂಡತಿಯ ಮೂಗು ಕತ್ತರಿಸಿದ್ದಾನೆ.
ಗಂಡನಿಂದ ಮೂಗು ಕತ್ತಿರಿಸಿಕೊಂಡ ಮಹಿಳೆಯನ್ನು ಅಕ್ಕ-ಪಕ್ಕದ ಮನೆಯವರು ಆಸ್ಪತ್ರೆಗೆ ಸೇರಿಸಿದ್ದಾರೆ. ಗಾಯಗೊಂಡ ಮಹಿಳೆಗೆ ಚಿಕಿತ್ಸೆ ನೀಡಿದ್ದು ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಘಟನೆ ಬಗ್ಗೆ ಮಾತನಾಡಿರುವ ಮಹಿಳೆ, ತನ್ನ ಗಂಡನ ಕ್ರೌರ್ಯವನ್ನು ಎಳೆ, ಎಳೆಯಾಗಿ ಬಿಚ್ಚಿಟ್ಟಿದ್ದಾಳೆ.
ಈ ಮಹಿಳೆಯ ಗಂಡನಿಗೆ ತನ್ನ ಹೆಂಡತಿ ಎಲ್ಲಿಗೂ ಹೋಗುವುದು ಇಷ್ಟವಿರಲಿಲ್ಲ. ಎಲ್ಲೇ ಹೋದರು ಜಗಳ ಮಾಡುತ್ತಿದ್ದ. ರಾಖಿ ಹಬ್ಬಕ್ಕಾಗಿ ತವರಿಗೆ ಹೋಗುತ್ತೇನೆ ಎಂದು ಹಠ ಮಾಡಿದಾಗ ಮೂಗು ಕತ್ತರಿಸಿದ್ದಾನೆ ಎಂದು ಹೇಳಿದ್ದಾರೆ. ತೀವ್ರ ರಕ್ತಸ್ರಾವದಿಂದ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಈ ಘಟನೆಯ ವಿಚಾರಣೆ ನಡೆಸಿದಾಗ ಹೆಂಡತಿಯ ಮೂಗು ಕತ್ತರಿಸಿದ ಗಂಡನನ್ನು ರಾಹುಲ್ ಎಂದು ಗುರುತಿಸಲಾಗಿದೆ. ರಾಹುಲ್ ಬನಿಯಾನಿ ಪುರ್ವಾದ ನಿವಾಸಿ. ರಾಹುಲ್ ಪತ್ನಿ ಅನಿತಾ ಗಾಯಗೊಂಡ ಮಹಿಳೆಯಾಗಿದ್ದಾರೆ. ಸದ್ಯ 25 ವರ್ಷದ ಅನಿತಾ ಸ್ಥಿತಿ ಗಂಭೀರವಾಗಿದ್ದು, ಹಾರ್ಡೋಯಿ ಆಸ್ಪತ್ರೆಯಿಂದ ಲಕ್ನೋ ಟ್ರಾಮಾ ಸೆಂಟರ್‌ಗೆ ಸ್ಥಳಾಂತರ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
https://x.com/azizkavish/status/1825492390867599696?