Bengaluru 28°C
Ad

ರೋಗಿಯ ತಲೆಗೆ ಹೊಲಿಗೆ ಹಾಕಿ ಸೂಜಿಯನ್ನು ಅಲ್ಲಿಯೇ ಮರೆತು ಬಿಟ್ಟ ವೈದ್ಯ!

ರೋಗಿಯ ತಲೆಗೆ ಹೊಲಿಗೆ ಹಾಕಿ ಸೂಜಿಯನ್ನು ಅಲ್ಲಿಯೇ ಮರೆತು ಬಿಟ್ಟಿರುವ ಘಟನೆ ಉತ್ತರಪ್ರದೇಶದ ಹಾಪುರದಲ್ಲಿ ನಡೆದಿದೆ.

ಉತ್ತರಪ್ರದೇಶ: ರೋಗಿಯ ತಲೆಗೆ ಹೊಲಿಗೆ ಹಾಕಿ ಸೂಜಿಯನ್ನು ಅಲ್ಲಿಯೇ ಮರೆತು ಬಿಟ್ಟಿರುವ ಘಟನೆ ಉತ್ತರಪ್ರದೇಶದ ಹಾಪುರದಲ್ಲಿ ನಡೆದಿದೆ.

ಅಕ್ಕಪಕ್ಕದ ಮನೆಯವರ ನಡುವೆ ನಡೆದ ಕಲಹದಲ್ಲಿ ಸಿತಾರಾ ಎಂಬುವವರಿಗೆ ಗಂಭೀರ ಗಾಯವಾಗಿತ್ತು. ಅವರನ್ನು ಸಮುದಾಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಇಲ್ಲಿ ಆಕೆಯ ತಲೆಗೆ ಹೊಲಿಗೆ ಹಾಕಿದ್ದ ವೈದ್ಯರು ಸೂಜಿಯನ್ನು ಅಲ್ಲಿಯೇ ಬಿಟ್ಟು, ತಲೆಗೆ ಬ್ಯಾಂಡೇಜ್ ಮಾಡಿ ಮನೆಗೆ ಕಳುಹಿಸಿದ್ದರು.

ಮನೆಗೆ ಹಿಂದಿರುಗಿದ ಯುವತಿಗೆ ನೋವಿನಿಂದ ಕಿರುಚಾಡಲು ಶುರು ಮಾಡಿದ್ದಳು, ಕೂಡಲೇ ಆಕೆಯನ್ನು ಕುಟುಂಬದವರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿದ್ದ ವೈದ್ಯರು ಆಕೆಯ ಬ್ಯಾಂಡೇಜ್ ತೆಗೆದು ಗಾಯದ ಮೇಲಿದ್ದ ಸೂಜಿಯನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.

ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಪಾನಮತ್ತರಾಗಿದ್ದರು ಎಂದು ಯುವತಿಯ ತಾಯಿ ಹೇಳಿದ್ದಾರೆ. ಯಾರೂ ಕೂಡ ಅಲ್ಲಿಗೆ ಹೋಗಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಹಾಪುರ್ ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿ ಡಾ ಸುನಿಲ್ ತ್ಯಾಗಿ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಘಟನೆಯ ಬಗ್ಗೆ ನಮಗೆ ತಿಳಿದಿದೆ. ದ್ವಿಸದಸ್ಯ ತಂಡದಿಂದ ತನಿಖೆಗೆ ಆದೇಶಿಸಿದ್ದೇವೆ, ವರದಿ ಬಂದ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದರು.

 

Ad
Ad
Nk Channel Final 21 09 2023