Ad

ದೇಶ ಸಂಪೂರ್ಣವಾಗಿ ‘ಸ್ವದೇಶಿ’ ಕಾನೂನು ವ್ಯವಸ್ಥೆಯನ್ನು ಹೊಂದಿದೆ: ಅಮಿತ್ ಶಾ

ಇಂದು ಜಾರಿಗೆ ಬಂದ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಶಿಕ್ಷೆಯ ಬದಲಿಗೆ ನ್ಯಾಯವನ್ನು ಖಚಿತಪಡಿಸಲಾಗುತ್ತದೆ. ಸ್ವಾತಂತ್ರ್ಯಪಡೆದು 77 ವರ್ಷಗಳ ಬಳಿಕ ದೇಶವು ಸಂಪೂರ್ಣವಾಗಿ ‘ಸ್ವದೇಶಿ’ ಕಾನೂನು ವ್ಯವಸ್ಥೆಯನ್ನು ಹೊಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. 

ನವದೆಹಲಿ: ಇಂದು ಜಾರಿಗೆ ಬಂದ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಶಿಕ್ಷೆಯ ಬದಲಿಗೆ ನ್ಯಾಯವನ್ನು ಖಚಿತಪಡಿಸಲಾಗುತ್ತದೆ. ಸ್ವಾತಂತ್ರ್ಯಪಡೆದು 77 ವರ್ಷಗಳ ಬಳಿಕ ದೇಶವು ಸಂಪೂರ್ಣವಾಗಿ ‘ಸ್ವದೇಶಿ’ ಕಾನೂನು ವ್ಯವಸ್ಥೆಯನ್ನು ಹೊಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

Ad
300x250 2

ಅವರು ಮಾಧ್ಯಮಗಳ ಜೊತೆ ಮಾತನಾಡಿ, ವಸಾಹತುಶಾಹಿ ಯುಗದ ಅಪರಾಧ ಸಂಹಿತೆಯ ಕೂಲಂಕಷ ಪರಿಶೀಲನೆ ನಡೆಸಿ ನ್ಯಾಯ ವ್ಯವಸ್ಥೆಗೆ ʼಭಾರತೀಯ ಆತ್ಮʼವನ್ನು ಸೇರಿಸಲಾಗಿದೆ ಎಂದು ಹೇಳಿದ್ದಾರೆ.

ಭಾರತೀಯ ದಂಡ ಸಂಹಿತೆ, ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳನ್ನು ತಿದ್ದುಪಡಿಗೆ ಒಳಪಡಿಸಲಾಗಿದೆ. ಇವುಗಳ ಬದಲಾಗಿ ಮೂರು ಹೊಸ ಕಾನೂನುಗಳು ಇಂದಿನಿಂದಲೇ ದೇಶಾದ್ಯಂತ ಜಾರಿಗೆ ಬಂದಿವೆ.

ಮಹಿಳೆಯರ ವಿರುದ್ಧದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ʼಹೊಸ ಕಾನೂನು ಸಂತ್ರಸ್ತೆಯ ಹೇಳಿಕೆಯನ್ನು ಅವರ ಮನೆಯಲ್ಲಿ ದಾಖಲಿಸಲು ಅವಕಾಶ ನೀಡುತ್ತದೆ ಮತ್ತು ಸಾಮಾಜಿಕ ಕಳಂಕದಿಂದ ಆಕೆಯನ್ನು ರಕ್ಷಿಸುವ ಉದ್ದೇಶದಿಂದ ಆನ್‌ಲೈನ್‌ ಎಫ್ಐಆರ್ ಸೌಲಭ್ಯವನ್ನೂ ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.

ಸಾಮಾಹಿಕ ಹತ್ಯೆ ಪ್ರಕರಣದ ಬಗ್ಗೆ ಈ ಹಿಂದೆ ಯಾವುದೇ ಪ್ರತ್ಯೇಕ ಕಾನೂನಿನ ಪ್ರಸ್ತಾವ ಇರಲಿಲ್ಲ. ಈಗ ಅದಕ್ಕೂ ಅವಕಾಶ ಕಲ್ಪಿಸಲಾಗಿದೆ. ಇದು ಬಹುದಿನಗಳ ಬೇಡಿಕೆಯಾಗಿತ್ತು. ಅಲ್ಲದೆ ನಾವು ದೇಶದ್ರೋಹದ ವಿಭಾಗವನ್ನು ಸಂಪೂರ್ಣವಾಗಿ ತೆಗೆದು ಹಾಕಿದ್ದೇವೆ ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆಗಳಿಗಾಗಿ ಹೊಸ ವಿಭಾಗವನ್ನು ತಂದಿದ್ದೇವೆ.

ಈ ಹಿಂದೆ ಸರ್ಕಾರದ ವಿರುದ್ಧ ಹೇಳಿಕೆ ನೀಡುವುದು ಅಪರಾಧವಾಗಿತ್ತು. ಈಗ ಭಾರತದ ಏಕತೆ ಮತ್ತು ಸಾರ್ವಭೌಮತ್ವಕ್ಕೆ ಹಾನಿ ಮಾಡುವ ಪ್ರಯತ್ನಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ಅವಕಾಶ ನೀಡುತ್ತದೆ ಎಂದರು.

ನಾವು ಕೇವಲ ತಂತ್ರಜ್ಞಾನವನ್ನು ಅಳವಡಿಸಿಕೊಂಡಿಲ್ಲ, ಮುಂದಿನ 50 ವರ್ಷಗಳಲ್ಲಿ ಸಂಭವಿಸಬಹುದಾದ ತಾಂತ್ರಿಕ ಬದಲಾವಣೆಗಳನ್ನು ಊಹಿಸಿ ಅದಕ್ಕೆ ತಕ್ಕಂತೆ ಬದಲಾವಣೆ ತಂದಿದ್ದೇವೆ. ಇದು ವಿಶ್ವದ ಅತ್ಯಂತ ಆಧುನಿಕ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಾಗಲಿದೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.

 

Ad
Ad
Nk Channel Final 21 09 2023
Ad