Bengaluru 23°C
Ad

3ನೇ ಬಾರಿ ಕುಸಿದು ಬಿದ್ದ 9 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ

ಬಿಹಾರದಲ್ಲಿ ಸೇತುವೆ ಕುಸಿತ ದ ಸರಣಿಗೆ ಇನ್ನೊಂದು ಸೇರ್ಪಡೆಯಾಗಿದೆ. ಕಳೆದ 9 ವರ್ಷಗಳಿಂದ ನಿರ್ಮಾಣವಾಗುತ್ತಲೇ ಇರುವ ಸೇತುವೆಯೊಂದು 3ನೇ ಬಾರಿ ಕುಸಿದು ಬಿದ್ದಿದೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಪಾಟ್ನ :  ಬಿಹಾರದಲ್ಲಿ ಸೇತುವೆ ಕುಸಿತ ದ ಸರಣಿಗೆ ಇನ್ನೊಂದು ಸೇರ್ಪಡೆಯಾಗಿದೆ. ಕಳೆದ 9 ವರ್ಷಗಳಿಂದ ನಿರ್ಮಾಣವಾಗುತ್ತಲೇ ಇರುವ ಸೇತುವೆಯೊಂದು 3ನೇ ಬಾರಿ ಕುಸಿದು ಬಿದ್ದಿದೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

Ad

ಬಿಹಾರದ ಭಾಗಲ್ಪುರದ ಸುಲ್ತಂಗಂಜ್‌-ಅಗುವಾನಿ ಘಾಟ್‌ನಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಶನಿವಾರ (ಆಗಸ್ಟ್‌ 17) ಬೆಳಿಗ್ಗೆ ಕುಸಿದು ಗಂಗಾ ನದಿ ಪಾಲಾಗಿದೆ. ಅದೃಷ್ಟವಶಾತ್‌ ಯಾರಿಗೂ ಗಾಯಗಳಾಗಿಲ್ಲ. ಗಮನಾರ್ಹ ಅಂಶ ಎಂದರೆ ಈ ಸೇತುವೆಯನ್ನೂ ಕಳೆದ 9 ವರ್ಷಗಳಿಂದ ನಿರ್ಮಿಸಲಾಗುತ್ತಿದ್ದು ಇನ್ನೂ ಪೂರ್ಣವಾಗಿಲ್ಲ. ಅಲ್ಲದೆ ಈ ಸೇತುವೆಯ ಕೆಲವೊಂದು ಭಾಗಗಳು ಈ ಹಿಂದೆ ಎರಡು ಬಾರಿ ಕುಸಿದು ಬಿದ್ದಿದ್ದವು. ಇದೀಗ ಮತ್ತೊಮ್ಮೆ 9 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿದು ಬಿದ್ದಿದೆ.

Ad

Ad
Ad
Nk Channel Final 21 09 2023