ಹೈದರಾಬಾದ್: ಕೊತಗುಡ ಫ್ಲೈಓವರ್ ಮೇಲೆ ವೇಗವಾಗಿ ತೆರಳುತ್ತಿದ್ದ ಬೈಕ್ವೊಂದು ಕೆಳಗೆ ಬಿದ್ದು ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಹೈದರಾಬಾದ್ ಸಿಟಿಯಲ್ಲಿ ನಡೆದಿದೆ.
ಆಂಧ್ರ ಪ್ರದೇಶದ ಗುಂಟೂರು ಮೂಲದ ಕೆ.ರೋಹಿತ್ (27), ಬಾಲ ಪ್ರಸನ್ (26) ಮೃತಪಟ್ಟ ದುರ್ದೈವಿಗಳು. ಇವರಿಬ್ಬರು ಮಸೀದಿ ಬಂಡಾದಿಂದ ಹಫೀಜ್‌ಪೇಟೆಗೆ ಬೈಕ್ನಲ್ಲಿ ಕೊತಗುಡ ಫ್ಲೈಓವರ್ ಮೇಲೆ ವೇಗವಾಗಿ ತೆರಳುತ್ತಿದ್ದರು.
ಈ ವೇಳೆ ಫ್ಲೈಓವರ್ ಪ್ಯಾರಪೆಟ್‌ಗೆ ಬೈಕ್ ಡಿಕ್ಕಿಯಾದ ಪರಿಣಾಮ ಮೇಲಿನಿಂದ ಗಾಳಿಯಲ್ಲಿ ಹಾರಿಕೊಂಡು ಇಬ್ಬರು ಕೆಳಗಿನ ರಸ್ತೆಗೆ ಬಿದ್ದಿದ್ದಾರೆ. ಇದರಿಂದ ಸ್ಥಳದಲ್ಲೇ ಯುವಕರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗಚಿಬೌಲಿ ನಗರದ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಯುವಕರು ಹೈದರಾಬಾದ್ನ ಮಿಯಾಪುರ್ನಲ್ಲಿ ವಾಸವಿದ್ದರು.
ಫ್ಲೈಓವರ್ ಮೇಲೆ ಅತಿ ವೇಗವಾಗಿ ಬರುವಾಗ ಈ ದುರ್ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ಮೃತದೇಹಗಳ ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.