Bengaluru 22°C
Ad

ದೆಹಲಿಯಲ್ಲಿ ಉಷ್ಣ ತಾಪ ಏರಿಕೆ : 24 ಗಂಟೆಗಳಲ್ಲಿ 22 ಜನ ಮೃತ್ಯು

ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಉಷ್ಣ ಮಾರುತ ತನ್ನ ಆರ್ಭಟ ಮುಂದುವರಿಸಿದ್ದು, ಇದರ ಪರಿಣಾಮವಾಗಿ ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 22 ಜನರು ಉಷ್ಣ ಸಂಬಂಧಿ ವ್ಯಾಧಿಗಳಿಂದ ಸಾವನ್ನಪ್ಪಿದ್ದಾರೆ.

ನವದೆಹಲಿ: ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಉಷ್ಣ ಮಾರುತ ತನ್ನ ಆರ್ಭಟ ಮುಂದುವರಿಸಿದ್ದು, ಇದರ ಪರಿಣಾಮವಾಗಿ ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 22 ಜನರು ಉಷ್ಣ ಸಂಬಂಧಿ ವ್ಯಾಧಿಗಳಿಂದ ಸಾವನ್ನಪ್ಪಿದ್ದಾರೆ.

Ad
300x250 2

ಇದರೊಂದಿಗೆ 2 ದಿನದಲ್ಲಿ 42 ಜನರು ದಿಲ್ಲಿಯಲ್ಲಿ ತಾಪಕ್ಕೆ ಬಲಿಯಾದಂತಾಗಿದೆ. ಬುಧವಾರ ಒಂದೇ ದಿನ 20 ಮಂದಿ ಸಾವನ್ನಪ್ಪಿದ್ದರು. ಬಿಸಿಲ ಬೇಗೆ ಕಾರಣ ರಾಷ್ಟ್ರ ರಾಜಧಾನಿಯ ಪ್ರಮುಖ 3 ಆಸ್ಪತ್ರೆಗಳಲ್ಲಿ ಒಂದೇ ದಿನ 72 ಮಂದಿ ದಾಖಲಾಗಿದ್ದರು.

ಸಫರ್‌ಜಂಗ್ ಆಸ್ಪತ್ರೆಯಲ್ಲಿ 33 ಜನರು ಉಷ್ಣ ಸಂಬಂಧಿತ ಅನಾರೋಗ್ಯದಿಂದ ದಾಖಲಾಗಿದ್ದು, ಇವರಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ 22 ಜನರಲ್ಲಿ 4 ಜನರು ಮೃತಪಟ್ಟಿದ್ದಾರೆ. ದೆಹಲಿ ಸರ್ಕಾರದ ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ 5 ರೋಗಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಿಲ್ಲಿಯಲ್ಲಿ ಜೂ.11 ರಿಂದ 19ರ ವರೆಗೆ ಒಟ್ಟು 192 ಮಂದಿ ನಿರ್ವಸಿತರು ಬಿಸಿ ಗಾಳಿ ತಾಳದೇ ಮೃತಪಟ್ಟಿದ್ದಾರೆ ಎಂದು ಸ್ವಯಂಸೇವಾ ಸಂಸ್ಥೆಯ ವರದಿ ಹೇಳಿದೆ.

Ad
Ad
Nk Channel Final 21 09 2023
Ad