ನೆಲಮಂಗಲ: ಟೆಂಪೋಗೆ ವೇಗವಾಗಿ ಬಂದ ಟ್ಯಾಂಕರ್ ಡಿಕ್ಕಿಯಾಗಿ ಮೂವರು ಕಾರ್ಮಿಕರು ಮೃತಪಟ್ಟು, ಐವರಿಗೆ ಗಂಭೀರ ಗಾಯಗಳಾಗಿವೆ. ಈ ಘಟನೆ ನೆಲಮಂಗಲ ತಾಲೂಕಿನ ಕುಲುವನಹಳ್ಳಿ ಗೇಟ್ ಬಳಿ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಭೀಕರ ಸಂಭವಿಸಿದೆ.
ಕಾರ್ಮಿಕರೆಲ್ಲಾ ಉತ್ತರ ಕರ್ನಾಟಕ ಮೂಲದವರು ಎಂದು ತಿಳಿದುಬಂದಿದೆ. ಡಿಕ್ಕಿಯ ರಭಸಕ್ಕೆ 407 ಟೆಂಪೋದಲ್ಲಿದ್ದ ಕಾರ್ಮಿಕರು ಮತ್ತು ವಸ್ತಗಳು ಚೆಲ್ಲಾ ಪಿಲ್ಲಿಯಾಗಿ ರಸ್ತೆ ಬಿದ್ದಿವೆ. ಇದರಿಂದ ಕೆಲಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸ್ಥಳಕ್ಕೆ ನೆಲಮಂಗಲ ಸಂಚಾರ ಪೊಲೀಸರು ಧಾವಿಸಿ, ಕ್ರೇನ್ ಮುಖಾಂತರ ವಾಹನಗಳನ್ನು ತೆರವು ಮಾಡಿಸಿದರು.
Ad