Bengaluru 23°C
Ad

ಯೂಟ್ಯೂಬ್ ನೋಡಿ ನಕಲಿ ವೈದ್ಯನಿಂದ ಸರ್ಜರಿ: ಬಾಲಕ ಮೃತ್ಯು

ಯೂಟ್ಯೂಬ್ ನೋಡಿ ನಕಲಿ ವೈದ್ಯ ಸರ್ಜರಿ ಮಾಡಿದ ಪರಿಣಾಮ 17 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಪಾಟ್ನಾ: ಯೂಟ್ಯೂಬ್ ನೋಡಿ ನಕಲಿ ವೈದ್ಯ ಸರ್ಜರಿ ಮಾಡಿದ ಪರಿಣಾಮ 17 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಬಿಹಾರದ ಸರನ್ ಎಂಬಲ್ಲಿ ನಕಲಿ ವೈದ್ಯ ಯೂಟ್ಯೂಬ್ ವಿಡಿಯೋವನ್ನು ಅನುಸರಿಸಿ ಬಾಲಕನ ಪಿತ್ತಕೋಶದಲ್ಲಿರುವ ಕಲ್ಲನ್ನು ತೆಗೆಯುವುದಕ್ಕೆ ಆಪರೇಷನ್ ಮಾಡಿದ್ದಾರೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಬಾಲಕನನ್ನು ಪಾಟ್ನಾದ  ಬೇರೆ ಆಸ್ಪತ್ರೆಗೆ ಕರೆದೊಯ್ಯುವುದಕ್ಕೆ ಅಂಬುಲೆನ್ಸ್ ವ್ಯವಸ್ಥೆಯನ್ನು ಮಾಡಿದ್ದಾರೆ. ಮಾರ್ಗ ಮಧ್ಯೆ ಬಾಲಕ ಮೃತಪಟ್ಟಿದ್ದು, ದೇಹವನ್ನು ಆಸ್ಪತ್ರೆಯಲ್ಲಿ ಬಿಟ್ಟು ವೈದ್ಯರು ಹಾಗೂ ಜೊತೆಗಿದ್ದವರು ಪರಾರಿಯಾಗಿದ್ದಾರೆ.

ಬಾಲಕನು ಪದೇ ಪದೇ ವಾಂತಿ ಮಾಡುತ್ತಿದ್ದ. ಆದ್ದರಿಂದ ಆತನನ್ನು ಸರನ್ ನಗರದಲ್ಲಿರುವ ಗಣಪತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಡ್ಮಿಟ್ ಮಾಡಿಸಿದೆವು. ವಾಂತಿ ನಿಂತಿತ್ತು. ಆದರೆ ವೈದ್ಯ ಅಜಿತ್ ಕುಮಾರ್ ಪುರಿ ಈತನಿಗೆ ಆಪರೇಷನ್ ಅಗತ್ಯ ಇದೆ. ಆಪರೇಷನ್ ಮಾಡಬೇಕು ಎಂದರು. ಆದರೆ ಅವರು ಯೂಟ್ಯೂಬ್ ವಿಡಿಯೋವನ್ನು ನೋಡಿ ಆಪರೇಷನ್ ಮಾಡಿದ್ದರಿಂದ ನನ್ನ ಮಗ ಜೀವ ಕಳೆದುಕೊಂಡ ಎಂದು ಚಂದನ್ ಶಾ ಬೇಸರ ವ್ಯಕ್ತಪಡಿಸಿದರು.

ಘಟನೆಯ ಕುರಿತು ಪೊಲೀಸರು ವೈದ್ಯರ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಪರಾರಿಯಾದ ವೈದ್ಯ ಮತ್ತು ಆತನ ತಂಡದವರನ್ನು ಹುಡುಕುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ.

Ad
Ad
Nk Channel Final 21 09 2023