Bengaluru 22°C
Ad

ರಾಜ್ಯದಲ್ಲಿ ಕಾಂಗ್ರೆಸ್​ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ: ಅನುರಾಗ್ ಠಾಕೂರ್

 ರಾಜ್ಯದಲ್ಲಿ ಕಾಂಗ್ರೆಸ್​ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸುಖು ವಿಫಲರಾಗಿದ್ದಾರೆ ಹಿಮಾಚಲ ಪ್ರದೇಶದಲ್ಲಿ ಇತ್ತೀಚಿನ ಪ್ರವಾಹ ಪರಿಸ್ಥಿತಿಯನ್ನು ಕೂಡ ರಾಜಕೀಯಗೊಳಿಸಿದ್ದಾರೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಹಿಮಾಚಲಪ್ರದೇಶ: ರಾಜ್ಯದಲ್ಲಿ ಕಾಂಗ್ರೆಸ್​ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ವಿಫಲರಾಗಿದ್ದಾರೆ ಹಿಮಾಚಲ ಪ್ರದೇಶದಲ್ಲಿ ಇತ್ತೀಚಿನ ಪ್ರವಾಹ ಪರಿಸ್ಥಿತಿಯನ್ನು ಕೂಡ ರಾಜಕೀಯಗೊಳಿಸಿದ್ದಾರೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಕಾಂಗ್ರೆಸ್​ ಸರ್ಕಾರ ಹಿಮಾಚಲ ಪ್ರದೇಶದ ಜನತೆಗೆ ಏನನ್ನೂ ಮಾಡಿಲ್ಲ, ಬದಲಾಗಿ ಎಲ್ಲವನ್ನೂ ಲೂಟಿ ಮಾಡಿದೆ ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್​ ನಗೆಪಾಟಲಿಗೀಡಾಗಿದೆ ಎಂದರು.

ಮೋದಿ ಸರ್ಕಾರವು ಶೌಚಾಲಯಗಳು, ಉಚಿತ ಧಾನ್ಯಗಳು, ಗ್ಯಾಸ್​ ಸಿಲಿಂಡರ್​ಗಳನ್ನು ಒದಗಿಸಿದ್ದರಿಂದ ಮಹಿಳೆಯರಿಗೆ ಪ್ರಧಾನಿ ಮೇಲೆ ಸಂಪೂರ್ಣ ನಂಬಿಕೆ ಇದೆ. ಮಹಿಳೆಯರಿಗೆ ಸಂತೋಷ ಹಾಗೂ ಶಕ್ತಿಯನ್ನು ಒದಗಿಸುವ ಸೌಲಭ್ಯಗಳನ್ನು ಪ್ರಧಾನಿ ಒದಗಿಸಿದ್ದಾರೆ.

ಅನುರಾಗ್ ಠಾಕೂರ್ ಅವರು ವಿರೋಧ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡರು ಮತ್ತು ಕೆಲವರು ಭಾರತದಲ್ಲಿ ವಾಸಿಸುತ್ತಿದ್ದಾರೆ ಆದರೆ ಅವರ ಹೃದಯವು ಪಾಕಿಸ್ತಾನಕ್ಕಾಗಿ ಮಿಡಿಯುತ್ತದೆ ಎಂದು ಹೇಳಿದರು. ಪಾಕಿಸ್ತಾನದ ಕೆಲವರು ಭಾರತದ ವಿರೋಧ ಪಕ್ಷದ ನಾಯಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿಯಂತಹವರು ಗೆದ್ದರೆ ಪಾಕಿಸ್ತಾನಕ್ಕೆ ಸಂತೋಷವಾಗುತ್ತದೆ ಆದರೆ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಜೂನ್ 1 ರಂದು ಏಳನೇ ಹಂತದಲ್ಲಿ ಮತದಾನ ನಡೆಯಲಿದೆ. ಹಿಮಾಚಲ ಪ್ರದೇಶ, ಕಂಗ್ರಾ, ಶಿಮ್ಲಾ, ಮಂಡಿ ಮತ್ತು ಹಮೀರ್‌ಪುರದ ಎಲ್ಲಾ ನಾಲ್ಕು ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದೆ.

ಕೇಂದ್ರ ಸಚಿವ ಮತ್ತು ಹಮೀರ್‌ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನುರಾಗ್ ಠಾಕೂರ್ ಅವರು ಕಾಂಗ್ರೆಸ್‌ನ ಸತ್ಪಾಲ್ ರೈಜಾದಾ ಅವರನ್ನು ಎದುರಿಸುತ್ತಿದ್ದಾರೆ.

Ad
Ad
Nk Channel Final 21 09 2023
Ad