ಮುಂಬೈ: ಅಟಲ್ ಸೇತುವೆಯಿಂದ ಜಿಗಿದು ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುವಾಗ ಅದೃಷ್ಟವಶಾತ್ ಕ್ಯಾಬ್ ಡ್ರೈವರ್ ಹಾಗೂ ಟ್ರಾಫಿಕ್ ಪೊಲೀಸರ ಹರಸಾಹಸದಿಂದ ಬದುಕುಳಿಸಿರುವ ಘಟನೆ ನಡೆದಿದೆ.
ಮೇಲ್ನೋಟಕ್ಕೆ ಇದು ಆತ್ಮಹತ್ಯೆಗೆ ಯತ್ನ ಎಂದು ಕಾಣುತ್ತಿದೆಯಾದರು. ರಕ್ಷಣೆಯಾದ ಮಹಿಳೆ ಬೇರೆಯದ್ದೇ ಕಥೆಯನ್ನು ಹೇಳಿದ್ದಾಳೆ. ಮಹಿಳೆಯನ್ನು 56 ವಯಸ್ಸಿನ ರೀಮಾ ಪಟೇಲ್ ಮುಲುಂದದ ನಿವಾಸಿ ಎಂದು ಗುರುತಿಸಲಾಗಿದೆ.
ಮುಲುಂದದಿಂದ ಕ್ಯಾಬ್ ಬಾಡಿಗೆ ತೆಗೆದುಕೊಂಡು ಅಟಲ್ ಸೇತುವಿನ ಕಡೆ ಬಂದಿದ್ದಳು. ಈ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳು ಅಟಲ್ ಸೇತುವಿನ ಬ್ರಿಡ್ಜ್ನಿಂದ ಬೀಳಲು ಯತ್ನಿಸಿದ ಮಹಿಳೆಯನ್ನು ಕ್ಯಾಬ್ ಡ್ರೈವರ್ ರಕ್ಷಿಸಲು ಆಕೆಯ ಕೂದಲನ್ನು ಹಿಡಿದಿದ್ದನು.
ಇದೇ ವೇಳೆ ಅದೇ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ಟ್ರಾಫಿಕ್ ಪೊಲೀಸರಿಗೆ ಕ್ಯಾಬ್ ಡ್ರೈವರ್ ಗಟ್ಟಿಯಾಗಿ ಮಹಿಳೆಯ ಕೂದಲನ್ನು ಹಿಡಿದುಕೊಂಡಿದ್ದು ಹಾಗೂ ಆಕೆ ಬ್ರಿಡ್ಜ್ ನಡುವೆ ನೇತಾಡುತ್ತಿದ್ದನ್ನು ಕಂಡು ಕೂಡಲೇ ರಕ್ಷಣೆಗೆ ಧಾವಿಸಿ ಕೊನೆಗೆ ಮಹಿಳೆಯನ್ನು ಹರಸಾಹಸಪಟ್ಟು ರಕ್ಷಿಸಿದ್ದಾರೆ.
ಟ್ರಾಫಿಕ್ ಪೊಲೀಸರು ಹೇಳುವ ಪ್ರಕಾರ, ನಾವು ಅದೇ ದಾರಿಯಲ್ಲಿ ಸಂಚಾರ ಮಾಡುತ್ತಿದ್ದೆವು. ಆ ವೇಳೆ ಬ್ರಿಡ್ಜ್ ನಡುವೆ ಒಂದು ಕಾರ್ ನಿಂತಿದ್ದನ್ನು ಕಂಡೆವು. ಕೂಡಲೇ ಹತ್ತಿರ ಹೋಗಿ ನೋಡಿದಾಗ, ಮಹಿಳೆಯನ್ನು ರಕ್ಷಿಸಲು ಕ್ಯಾಬ್ ಚಾಲಕ ಸಾಹಸ ಮಾಡುತ್ತಿದ್ದ. ಕೂಡಲೇ ನಾವು ಕೂಡ ರಕ್ಷಣೆಗೆ ಧಾವಿಸಿ ,ಆಕೆಯನ್ನು ರಕ್ಷಿಸಿದೆವು ಎಂದು ಪೊಲೀಸ್ ಇನ್ಸ್ಪೆಕ್ಟರ್ ಗುಲ್ಫರೋಜ್ ಮುಜಾವರ್ ಹೇಳಿದ್ದಾರೆ.
ಮಹಿಳೆಯನ್ನು ರಕ್ಷಿಸಿದ ಪೊಲೀಸರು ಅಮರ್ಶೇಟ್, ಕಿರನ್ ಮಹತ್ರೆ, ಯಶ್ ಸೋನಾವಾನೆ ಎಂದು ಹೇಳಲಾಗಿದೆ. ಕ್ಯಾಬ್ ಡ್ರೈವರ್ನ ಹೆಸರು ಸಂಜಯ್ ದ್ವಾರಕಾ ಯಾದವ್ ಎಂದು ತಿಳಿದು ಬಂದಿದೆ.
https://x.com/Delhiite_/status/1824515930992599470?