Ad

ಆಲೂಗಡ್ಡೆ ಲಂಚ ಕೇಳಿದಕ್ಕೆ ಸಬ್ ಇನ್ಸ್‌ಪೆಕ್ಟರ್ ಅಮಾನತು : ಅಸಲಿಗೆ ಆಗಿದ್ದೇನು?

ಕನ್ನೌಜ್​ ಜಿಲ್ಲೆಯ ಸಬ್ ಇನ್ಸ್​ಪೆಕ್ಟರ್​ ಅಮಿತ್ ಕುಮಾರ್ ಅನ್ನುವವರು 5 ಕೆಜಿ ಆಲೂಗಡ್ಡೆಯನ್ನು ಲಂಚವಾಗಿ ಕೇಳಿದ ಆಡಿಯೋವೊಂದು ದೊಡ್ಡದಾಗಿ ಸದ್ದು ಮಾಡಿತ್ತು. ಆಡಿಯೋದಲ್ಲಿ ಅಮಿತ್ ಕುಮಾರ್ ಐದು ಕೆಜಿ ಆಲೂಗಡ್ಡೆಯನ್ನು ಕೊಡುವಂತೆ ಆಗ್ರಹಿಸಿದ್ದಾರೆ.

ಕನ್ನೌಜ್​ ಜಿಲ್ಲೆಯ ಸಬ್ ಇನ್ಸ್​ಪೆಕ್ಟರ್​ ಅಮಿತ್ ಕುಮಾರ್ ಅನ್ನುವವರು 5 ಕೆಜಿ ಆಲೂಗಡ್ಡೆಯನ್ನು ಲಂಚವಾಗಿ ಕೇಳಿದ ಆಡಿಯೋವೊಂದು ದೊಡ್ಡದಾಗಿ ಸದ್ದು ಮಾಡಿತ್ತು. ಆಡಿಯೋದಲ್ಲಿ ಅಮಿತ್ ಕುಮಾರ್ ಐದು ಕೆಜಿ ಆಲೂಗಡ್ಡೆಯನ್ನು ಕೊಡುವಂತೆ ಆಗ್ರಹಿಸಿದ್ದಾರೆ. ಆದ್ರೆ ಮತ್ತೊಂದು ಕಡೆ ಬಂದ ಧ್ವನಿ ಐದು ಕೆಜಿ ಎಲ್ಲಾ ಕೊಡೊಕೆ ಆಗಲ್ಲ, ಎರಡು ಕೆಜಿ ಕೊಡ್ತೀನಿ ಎಂದಿದ್ದಾನೆ. ಇದರಿಂದ ರೊಚ್ಚಿಗೆದ್ದ ಸಬ್​ ಇನ್ಸ್​ಪೆಕ್ಟರ್ ಅಮಿತ್ ಕುಮಾರ್, ಕಡೆಯಾದಾಗಿ ಮೂರು ಕೆಜಿ ಕೊಡು ಎಂದು ಜೋರ್ ಮಾಡಿ ಡೀಲ್ ಕುದಿರಿಸಿದ್ದಾನೆ.

ಈ ಡೀಲ್ ದೊಡ್ಡದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದಾಗ, ತನಿಖೆಗೆ ಇಳಿದ ಪೊಲೀಸರಿಗೆ ಅಮಿತ್ ಕುಮಾರ್ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದು ಸಾಬೀತಾಗಿದೆ. ಕೂಡಲೇ ಅಮಿತ್​ಕುಮಾರ್​​ನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

 

Ad
Ad
Nk Channel Final 21 09 2023