Bengaluru 21°C
Ad

ಬೀಫ್ ಅಡುಗೆ ಮಾಡಿದ್ದಕ್ಕೆ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರಹಾಕಿದ ಕಾಲೇಜು

Cooking

ಒಡಿಶಾ: ಬರ್ಹಾಂಪುರದ ಪರಲಾ ಮಹಾರಾಜ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೀಫ್ ಅಡುಗೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಏಳು ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರಹಾಕಲಾಗಿದೆ.

ಇದರ ಬೆನ್ನಲ್ಲೇ ಕಾಲೇಜಿನಲ್ಲಿ ಉದ್ವಿಗ್ನ ವಾತಾವಾರಣವುಂಟಾಗಿದ್ದು ಕಾಲೇಜು ಆವರಣದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. “ಹಾಲ್ ಆಫ್ ರೆಸಿಡೆನ್ಸ್‌ನ ನಿಯಮಗಳು ಮತ್ತು ನೀತಿ ಸಂಹಿತೆ”ಗೆ ವಿರುದ್ಧವಾದ ‘ನಿರ್ಬಂಧಿತ ಚಟುವಟಿಕೆಗಳಲ್ಲಿ’ ವಿದ್ಯಾರ್ಥಿಗಳು ತೊಡಗಿಸಿಕೊಂಡಿದ್ದರಿಂದ ಅವರನ್ನು ಹೊರಹಾಕಲಾಗಿದೆ. ಹೊರಹಾಕಲ್ಪಟ್ಟ ವಿದ್ಯಾರ್ಥಿಗಳಲ್ಲಿ ಒಬ್ಬರಿಗೆ ₹ 2,000 ದಂಡವನ್ನು ವಿಧಿಸಲಾಗಿದೆ.

ಬುಧವಾರ ರಾತ್ರಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ‘ಬೀಫ್’ ಬೇಯಿಸಿದ್ದರು ಎನ್ನಲಾಗಿದೆ. ತರುವಾಯ, ಹಾಸ್ಟೆಲ್ ನಲ್ಲಿದ್ದ ಮತ್ತೊಂದು ಗುಂಪು ಘಟನೆಯನ್ನು ಡೀನ್‌ಗೆ ವರದಿ ಮಾಡಿದೆ ಎಂದು ವಿದ್ಯಾರ್ಥಿಗಳ ಕಲ್ಯಾಣ ವಿಭಾಗದ ಡೀನ್ ಗುರುವಾರ ಅಧಿಸೂಚನೆಯಲ್ಲಿ ಹೇಳಿರುವುದಾಗಿ ವರದಿಯಾಗಿದೆ.

Ad
Ad
Nk Channel Final 21 09 2023