Bengaluru 21°C
Ad

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಕಲ್ಲು ತೂರಾಟ: ಇಬ್ಬರ ಬಂಧನ

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಇಬ್ಬರನ್ನು ಆರ್‌ಪಿಎಫ್‌ ಬಂಧಿಸಿದ ಘಟನೆ ಬಿಹಾರದ ಗಯಾದ ಮನ್ಪುರ್ ರೈಲ್ವೆ ವಿಭಾಗ ಪ್ರದೇಶದಲ್ಲಿ ನಡೆದಿದೆ.

ಪಾಟ್ನಾ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಇಬ್ಬರನ್ನು ಆರ್‌ಪಿಎಫ್‌ ಬಂಧಿಸಿದ ಘಟನೆ ಬಿಹಾರದ ಗಯಾದ ಮನ್ಪುರ್ ರೈಲ್ವೆ ವಿಭಾಗ ಪ್ರದೇಶದಲ್ಲಿ ನಡೆದಿದೆ.

Ad

ಮನ್‌ಪುರ ನಿವಾಸಿಗಳಾದ ವಿಕಾಸ್ ಕುಮಾರ್ (20) ಮತ್ತು ಮನೀಶ್ ಕುಮಾರ್ (20) ಬಂಧಿತ ಆರೋಪಿಗಳು. ಮಾಹಿತಿಯ ಪ್ರಕಾರ, ಪಾಟ್ನಾ ಟಾಟಾ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಗಯಾ ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗಯಾ ನಿಲ್ದಾಣದಿಂದ ಹೊರಟಿತ್ತು. ಈ ವೇಳೆ ಮನ್‌ಪುರ್ ರೈಲ್ವೆ ವಿಭಾಗದ ಬಳಿ ಅಪರಿಚಿತ ವ್ಯಕ್ತಿಗಳು ಕಲ್ಲೆಸೆದಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ರೈಲಿನ ಕಿಟಕಿಯ ಗಾಜು ಬಿರುಕು ಬಿಟ್ಟಿತ್ತು.

Ad

ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಆರ್‌ಪಿಎಫ್ ಸಿಬ್ಬಂದಿ ತನಿಖೆ ಕೈಗೊಂಡಿದ್ದಾರೆ. ಗಯಾ ಆರ್‌ಪಿಎಫ್ ವಿಶೇಷ ತಂಡವನ್ನು ರಚಿಸಿ ಘಟನಾ ಸ್ಥಳಕ್ಕೆ ದಾಳಿ ನಡೆಸಿ, ಪ್ರಕರಣ ದಾಖಲಿಸಿಕೊಂಡಿತ್ತು. ಘಟನೆಯ ಹಿನ್ನೆಲೆಯಲ್ಲಿ ವಿಕಾಸ್‌ ಕುಮಾರ್‌ ಹಾಗೂ ಮನೀಶ್‌ ಕುಮಾರ್‌ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

Ad

ಈ ವೇಳೆ ಆರೋಪಿಗಳು ಹೆಚ್ಚಿನ ರೈಲುಗಳನ್ನು ಟಾರ್ಗೆಟ್ ಮಾಡುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಆರೋಪಿಗಳಿಬ್ಬರೂ ಕ್ರಿಮಿನಲ್ ಇತಿಹಾಸ ಹೊಂದಿದ್ದು, ಇಬ್ಬರೂ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಹಾಯಕ ಸಬ್ ಇನ್ಸ್‌ಪೆಕ್ಟರ್ ರಾಮಸೇವಕ್ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.

Ad
Ad
Ad
Nk Channel Final 21 09 2023