ಮಧ್ಯಪ್ರದೇಶ : ಪ್ರಯಾಗರಾಜ್ ಗೆ ತೆರಳುತ್ತಿದ್ದ ವಿಶೇಷ ರೈಲಿನ ಬಾಗಿಲು ಮುಚ್ಚಿದ್ದಕ್ಕೆ ಆಕ್ರೋಶಗೊಂಡ ಪ್ರಯಾಣಿಕರು ರೈಲಿನ ಮೇಲೆ ಕಲ್ಲು ಎಸೆದಿರುವ ಘಟನೆ ಮಧ್ಯಪ್ರದೇಶದ ಹರ್ಪಾಲ್‌ಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೆ ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ ರೈಲಿಗೆ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು, ಇದೀಗ ಮಹಾ ಕುಂಭಮೇಳಕ್ಕೆ ಹೋಗುತ್ತಿದ್ದ ವಿಶೇಷ ರೈಲು ಝಾನ್ಸಿ ರೈಲ್ವೆ ನಿಲ್ದಾಣದಿಂದ ಹರ್ಪಾಲ್‌ಪುರ ನಿಲ್ದಾಣಕ್ಕೆ ಬರುತ್ತಿದ್ದಂತೆ ರೈಲಿನ ಮೇಲೆ ಪ್ರಯಾಣಿಕರು ಕಲ್ಲು ತೂರಾಟ ನಡೆಸಿದ್ದಾರೆ.
ಮಹಾಕುಂಭ ಮೇಳಕ್ಕೆ ಬರಲೆಂದು ಭಕ್ತರಿಗೆ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ಅದರಂತೆ ಹರ್ಪಾಲ್‌ಪುರ ಮಹಾ ಕುಂಭಮೇಳಕ್ಕೆ ಹೋಗುವ ವಿಶೇಷ ರೈಲಿಗಾಗಿ ಪ್ರಯಾಣಿಕರು ಕಾಯುತ್ತಿದ್ದರು. ಈ ವೇಳೆ ರೈಲ್ವೇ ನಿಲ್ದಾಣಕ್ಕೆ ರೈಲು ಆಗಮಿಸುತ್ತಿದ್ದಂತೆ ಪ್ರಯಾಣಿಕರು ರೈಲನ್ನು ಹತ್ತಲು ಮುಂದಾಗಿದ್ದಾರೆ.
ಪ್ರಯಾಣಿಕರು ಹತ್ತಲು ಹೋದಾಗ ಏಕಾಏಕಿ ರೈಲಿನ ಬಾಗಿಲು ಲಾಕ್ ಆಗಿವೆ. ಇದರಿಂದ ಕೋಪಗೊಂಡ ಪ್ರಯಾಣಿಕರು ಬೋಗಿಗಳ ಮೇಲೆ ಹಾಗೂ ಬಾಗಿಲು, ಕಿಟಕಿಗಳ ಮೇಲೂ ಕಲ್ಲು ಎಸೆದಿದ್ದಾರೆ.
https://x.com/MeghUpdates/status/1884122625062121776?