ಛತ್ತೀಸ್‌ಗಢ : ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಮತ್ತೊಮ್ಮೆ ಕಲ್ಲು ತೂರಾಟ ನಡೆಸಿರುವ ಘಟನೆ ಛತ್ತೀಸ್‌ಗಢದ ಮಹಾಸಮುಂಡ್ ಜಿಲ್ಲೆಯಲ್ಲಿ ದುರ್ಗ್-ವಿಶಾಖಪಟ್ಟಣ ನಡುವೆ ಪ್ರಾಯೋಗಿಕ ಚಾಲನೆ ವೇಳೆ ನಡೆದಿದೆ.
ದುರ್ಗ್-ವಿಶಾಖಪಟ್ಟಣಂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ದುರ್ಗದಿಂದ ಸೆಪ್ಟೆಂಬರ್ 16 ರಂದು ನಿಯಮಿತ ಓಡಾಟಕ್ಕಾಗಿ ಲೋಕಾರ್ಪಣೆಗೊಳ್ಳುವುದಿದೆ. ಆದರೆ ಅಷ್ಟರಲ್ಲಾಗಲೇ ಕಿಡಿಗೇಡಿಗಳು ರೈಲು ಡ್ಯಾಮೇಜ್ ಮಾಡಿದ್ದಾರೆ
ಸಿ2, ಸಿ4 ಮತ್ತು ಸಿ9 ಎಂಬ ಮೂರು ಕೋಚ್‌ಗಳ ಕಿಟಕಿಯ ಗಾಜುಗಳು ಹಾನಿಯಾಗಿದೆ. ಇದು ಪ್ರಯೋಗಾರ್ಥ ಸಂಚಾರವಾದ್ದ್ಇಂದ ರೈಲಿನಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಇನ್ನು ವಂದೇ ಭಾರತ್ ರೈಲಿಗೆ ಕಲ್ಲು ತೂರಿದ ನಡೆಸಿದ ಐವರನ್ನು ಬಂಧಿಸಲಾಗಿದ್ದು, ಆರೋಪಿಗಳನ್ನು ಶಿವಕುಮಾರ್ ಬಘೇಲ್, ದೇವೇಂದ್ರ ಚಂದ್ರಕರ್, ಜಿತು ತಂದಿ, ಲೇಖ್ರಾಜ್ ಸೋನ್ವಾನಿ ಮತ್ತು ಅರ್ಜುನ್ ಯಾದವ್ ಎಂದು ಗುರುತಿಸಲಾಗಿದೆ. ಅಧಿಕೃತ ಮೂಲಗಳ ಪ್ರಕಾರ, ಬಂಧಿತ ಆರೋಪಿ ಬಾಘೇಲ್‌ರವರ ಸೊಸೆ ಬಾಗ್‌ಬಹ್ರಾದಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಆಗಿದ್ದಾರೆ ಎಂದು ತಿಳಿದುಬಂದಿದೆ