ರಾಜಸ್ಥಾನ: ಹಿಂದೂ ಧಾರ್ಮಿಕ ಮೆರವಣಿಗೆಯ ಮೇಲೆ ಮುಸ್ಲಿಮರು ಕಲ್ಲು ತೂರಾಟ ನಡೆಸಿದ ಘಟನೆ ಭಿಲ್ವಾರಾ ಜಿಲ್ಲೆಯ ಜಹಾಜ್‌ಪುರ ಪಟ್ಟಣದಲ್ಲಿ ನಡೆದಿದೆ. ದಾಳಿಯ ಪರಿಣಾಮ ಕಾಲ್ತುಳಿತಕ್ಕೆ ಅನೇಕ ಭಕ್ತರು ಗಾಯಗೊಂಡಿದ್ದಾರೆ.
ಹಿಂದೂ ಸಮುದಾಯದವರು ಏಕಾದಶಿ ನಿಮಿತ್ತ ಮೆರವಣಿಗೆಯನ್ನು ಕೈಗೊಂಡಿದ್ದರು. ಮೆರವಣಿಗೆಯು ಜಾಮಾ ಮಸೀದಿ ಬಳಿ ಸಮೀಪಿಸಿದಾಗ 20-25 ನಿಮಿಷಗಳ ಕಾಲ ಮಸೀದಿಯ ಒಳಗಿನಿಂದ ಹಿಂದೂಗಳ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿ ಮುಸ್ಲಿಮರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಹಿಂದೂಗಳು ಪ್ರತಿಭಟನೆ ನಡೆಸಿದರು.
ವಿಷಯ ತಿಳಿದ ಬಿಜೆಪಿ ಶಾಸಕ ಗೋಪಿಚಂದ್ ಮೀನಾ ಅವರು ಹಿಂದೂ ಸಮುದಾಯದೊಂದಿಗೆ ಸೇರಿ ಧರಣಿ ಕುಳಿತರು. ಈ ವೇಳೆ ಅಕ್ರಮ ಮಸೀದಿ ಯನ್ನು ಬುಲ್ಡೋಜರ್‌ನಿಂದ ಕೆಡವುದಾಗಿ ಭರವಸೆ ನೀಡಿದರು. ಈ ಮಧ್ಯೆ, ಪುರಸಭೆ ಜಾಮಾ ಮಸೀದಿಯ ಮುಖ್ಯಸ್ಥರಿಗೆ 24 ಗಂಟೆಗಳ ಒಳಗೆ ಜಮೀನು ಮಾಲೀಕತ್ವ, ನಿರ್ಮಾಣ ಮತ್ತು ಗುತ್ತಿಗೆಗೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ನೋಟಿಸ್ ಜಾರಿ ಮಾಡಿತು.
ಪೊಲೀಸರು ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 10 ಜನರನ್ನು ಬಂಧಿಸಿದ್ದಾರೆ. ಇದೀಗ ಶಂಕಿತರನ್ನು ವಿಚಾರಣೆ ನಡೆಸಲಾಗುತ್ತಿದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ತಡೆಯಲು ಜಹಾಜ್‌ಪುರದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ 10 ಆರೋಪಿಗಳನ್ನು ಬಂಧಿಸಿದ ನಂತರ, ಶಾಸಕ ಗೋಪಿಚಂದ್ ಮೀನಾ ಅವರು ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ಹಿಂದೂಗಳಿಗೆ ಮನವಿ ಮಾಡಿದರು.