ನವದೆಹಲಿ: ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯು ಎಂಟು ತಿಂಗಳ ಕಾರ್ಯಾಚರಣೆಯ ನಂತರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಶಸ್ವಿಯಾಗಿ ಭೂಮಿಗೆ ಮರಳಿದೆ. ಇದರ ವಿಡಿಯೋವನ್ನು ಇದೀಗ ನಾಸಾ ಹಂಚಿಕೊಂಡಿದೆ.
ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ನಾಸಾ, ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯು ಭೂಮಿಗೆ ಮರಳಿದೆ. ಸೆಪ್ಟೆಂಬರ್ 7 ರ 12:01 am ET ಸಿಬ್ಬಂದಿಯಿಲ್ಲದ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯು ನ್ಯೂ ಮೆಕ್ಸಿಕೋದ ವೈಟ್ ಸ್ಯಾಂಡ್ಸ್ ಸ್ಪೇಸ್ ಹಾರ್ಬರ್‌ನಲ್ಲಿ ಬಂದಿಳಿಯಿತು ಎಂದು ಬರೆದುಕೊಂಡಿದೆ.
ನಾಸಾ ಹಂಚಿಕೊಂಡಿರುವ ವಿಡಿಯೋದಲ್ಲಿ ನಾವು ಸ್ಟಾರ್‌ಲೈನರ್ ನಿಧಾನವಾಗಿ ಭೂಮಿಗೆ ಇಳಿಯುತ್ತಿರುವುದನ್ನು ಕಾಣಬಹುದಾಗಿದೆ. ಇನ್ನು ‘ಸ್ಟಾರ್‌ಲೈನರ್’ ಬಾಹ್ಯಾಕಾಶ ನಿಲ್ದಾಣವನ್ನು ತೊರೆದ ನಂತರ, ಸುನೀತಾ ವಿಲಿಯಮ್ಸ್ ಅವರು ರೇಡಿಯೊ ಸಂದೇಶದಲ್ಲಿ, ‘ಅವನು ತನ್ನ ಮನೆಗೆ ಹೋಗುತ್ತಿದ್ದಾನೆ’ ಎಂದು ಹೇಳಿದರು.
ಥ್ರಸ್ಟರ್ ಸಮಸ್ಯೆ ಮತ್ತು ಪ್ರೊಪಲ್ಷನ್ ಸಿಸ್ಟಮ್‌ನಲ್ಲಿನ ಬಹು ಹೀಲಿಯಂ ಸೋರಿಕೆಯಿಂದಾಗಿ ಬೋಯಿಂಗ್‌ನ ಸ್ಟಾರ್‌ಲೈನರ್ ತನ್ನ ಗಗನಯಾತ್ರಿಗಳಿಲ್ಲದೆ ಭೂಮಿಗೆ ಮರಳಿತು. NASA ಪೈಲಟ್‌ಗಳಿಬ್ಬರೂ (ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್) ಈಗ ಮುಂದಿನ ವರ್ಷ ಫೆಬ್ರವರಿವರೆಗೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇರುತ್ತಾರೆ.
https://x.com/NASA/status/1832269082474811672?