ಚೆನ್ನೈ: ಎಸ್‌ಪಿ ಬಾಲಸುಬ್ರಮಣ್ಯಂ ಅವರ ಸ್ಮರಣಾರ್ಥ ಅವರ ನಿವಾಸ ಇರುವ ಚೆನ್ನೈನ ನುಂಗಂಬಾಕ್ಕಂನ ಕಾಮ್ದಾರ್ ನಗರದ ಮೊದಲ ಬೀದಿಗೆ ‘ಎಸ್.ಬಿ.ಬಾಲಸುಬ್ರಮಣ್ಯಂ ರಸ್ತೆ’ ಎಂದು ನಾಮಕರಣ ಮಾಡಲಾಗುವುದು ಎಂದು ತಮಿಳನಾಡು ಮುಖ್ಯಮಂತ್ರಿ ಸ್ಟಾಲಿನ್ ಘೋಷಿಸಿದ್ದಾರೆ.
ಎಸ್‌ಬಿಬಿ ಅವರ ಸ್ಮರಣಾರ್ಥ ಅವರು ವಾಸಿಸುತ್ತಿದ್ದ ಕಾಮ್ದಾರ್ ನಗರ ಪ್ರದೇಶವನ್ನು ಎಸ್‌ಬಿಬಿ ನಗರ ಎಂದು ಮರುನಾಮಕರಣ ಮಾಡುವಂತೆ ಅವರ ಪುತ್ರ ಸರಣ್ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಗೆ ವಿನಂತಿಸಿದ್ದರು. ಎಸ್‌ಪಿಬಿ ಪುಣ್ಯಸ್ಮರಣೆ ದಿನವಾದ ಇಂದು ಅವರ ಮನೆ ಇರುವ ಪ್ರದೇಶದ ರಸ್ತೆಗೆ ಅವರ ಹೆಸರನ್ನು ಇಡಲಾಗುವುದು ಎಂದು ಮುಖ್ಯಮಂತ್ರಿ ಸ್ಟಾಲಿನ್ ಘೋಷಿಸಿದ್ದಾರೆ.
ತಮ್ಮ 55 ವರ್ಷಗಳ ಸುದೀರ್ಘ ಸಂಗೀತ ವೃತ್ತಿ ಬದುಕಿನಲ್ಲಿ 40 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ ಕೀರ್ತಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರದ್ದಾಗಿದೆ. ಸುಮಾರು 16 ಭಾಷೆಗಳಲ್ಲಿ ಒಟ್ಟು 40,000 ಹಾಡುಗಳನ್ನು ಹಾಡುಗಳ ಮೂಲಕ ಯಾರೂ ಸರಿಗಟ್ಟದ ದಾಖಲೆ ಮಾಡಿದ್ದಾರೆ. ಆರು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮಶ್ರೀ ಮತ್ತು ಪದ್ಮಭೂಷಣವನ್ನು ಪಡೆದಿದ್ದಾರೆ.
ಎಸ್ ಪಿ ಬಾಲಸುಬ್ರಹ್ಮಣ್ಯಂ ಭಾಷೆ, ಗಡಿಯನ್ನು ಮೀರಿದ ಕಲಾವಿದರಾಗಿದ್ದರು. ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಚಿತ್ರಗಳಲ್ಲಿ ಹಾಡಿ ಸೈ ಎನಿಸಿಕೊಂಡವರು.