ಹಿಮಾಚಲ ಪ್ರದೇಶ : ಮನಾಲಿಯಲ್ಲಿ ಚಳಿಗಾಲದ ಹಿಮಪಾತ ಆರಂಭವಾಗಿದ್ದು, ಇಲ್ಲಿ ಪ್ರವಾಸಿಗರು ದಿನವಿಡೀ ಸೋಲಾಂಗ್ ಕಣಿವೆಯಲ್ಲಿ ಹಿಮಪಾತವನ್ನು ಆನಂದಿಸಿದ್ದಾರೆ. ಆದ್ರೆ ಆ ಬಳಿಕ ಸಂಜೆ ವೇಳೆಗೆ ಅಲ್ಲಿಂದ ತೆರಳಲು ಮುಂದಾದಾಗ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ.
ಇದ್ದಕ್ಕಿದ್ದಂತೆ ಸೃಷ್ಟಿಯಾದ ಭಾರೀ ಹಿಮಪಾತದಿಂದಾಗಿ ಸುಮಾರು 1,500 ಕ್ಕೂ ಹೆಚ್ಚು ವಾಹನಗಳು ಸೋಲಾಂಗ್ ಕಣಿವೆ ಮತ್ತು ಪಾಲ್ಚನ್ ನಡುವೆ ಸಿಲುಕಿಕೊಂಡಿದ್ದವು. ಇಲ್ಲಿನ ರಸ್ತೆಗಳಲ್ಲಿ ಹಿಮದ ಶೇಖರಣೆಯಿಂದಾಗಿ ವಾಹನಗಳು ಸ್ಕಿಡ್ ಆಗಿದ್ದು, ಟ್ರಾಫಿಕ್ ಜಾಮ್ ರೀತಿಯ ಪರಿಸ್ಥಿತಿ ಉಂಟಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಮನಾಲಿ ಎಸ್ಪಿ ಡಾ.ಕಾರ್ತಿಕೇಯನ್ ಗೋಕುಲಚಂದ್ರನ್, ಹಿಮದಲ್ಲಿ ಸಿಲುಕಿರುವ ವಾಹನಗಳ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
https://x.com/NikhilCh_/status/1871242363647213889?