Ad

ಸಿಕ್ಕಿಂ ಸಿಎಂ ಪತ್ನಿ ಕೃಷ್ಣಕುಮಾರಿ ಶಾಸಕಿಯಾಗಿ ಪ್ರಮಾಣವಚನ ಸ್ವೀಕಾರ: ಮರುದಿನವೇ ರಾಜೀನಾಮೆ

ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರ ಪತ್ನಿ ಕೃಷ್ಣ ಕುಮಾರಿ ರೈ ಅವರು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ರಾಜೀನಾಮೆ ನೀಡಿರುವ ಘಟನೆ ಸಿಕ್ಕಿಂ ನಡೆದಿದೆ.

ಸಿಕ್ಕಿಂ: ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರ ಪತ್ನಿ ಕೃಷ್ಣ ಕುಮಾರಿ ರೈ ಅವರು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ರಾಜೀನಾಮೆ ನೀಡಿರುವ ಘಟನೆ ಸಿಕ್ಕಿಂ ನಡೆದಿದೆ.

Ad
300x250 2

ರಾಜೀನಾಮೆಯನ್ನು ಸ್ಪೀಕರ್ ಎಂಎನ್ ಶೆರ್ಪಾ ಅವರು ಅಂಗೀಕರಿಸಿದ್ದಾರೆ. ಕೃಷ್ಣ ಕುಮಾರಿ ರೈ ಅವರು ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್  ಅಭ್ಯರ್ಥಿ ಬಿಮಲ್ ರೈ ಅವರನ್ನು ಸೋಲಿಸಿ ವಿಧಾನಸಭೆ ಚುನಾವಣೆಯಲ್ಲಿ ನಾಮ್ಚಿ-ಸಿಂಘಿತಂಗ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.

ರೈ 7907 ಮತಗಳನ್ನು ಪಡೆದರೆ, ಅವರ ಎಸ್‌ಡಿಎಫ್ ಎದುರಾಳಿ 2605 ಮತಗಳನ್ನು ಗಳಿಸಿದ್ದರು. ಕ್ಷೇತ್ರದಿಂದ ಎಸ್‌ಕೆಎಂ ನಾಯಕನ ವಿರುದ್ಧ ಸ್ಪರ್ಧಿಸಿದ್ದ ಮಹೇಶ್ ರೈ (ಸಿಎಪಿ-ಎಸ್) ಮತ್ತು ಅರುಣಾ ಮಾಂಗರ್ (ಬಿಜೆಪಿ) ಕ್ರಮವಾಗಿ 136 ಮತ್ತು 233 ಮತಗಳನ್ನು ಪಡೆದಿದ್ದರು.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ, 56 ವರ್ಷದ ಪ್ರೇಮ್ ಸಿಂಗ್ ತಮಾಂಗ್ ನೇತೃತ್ವದ ಎಸ್‌ಕೆಎಂ, ಲೋಕಸಭೆ ಚುನಾವಣೆಗಳಲ್ಲಿ ರಾಜ್ಯ ಚುನಾವಣೆಗಳಲ್ಲಿ ಪ್ರಚಂಡ ಗೆಲುವು ಸಾಧಿಸಿತು.

32 ವಿಧಾನಸಭಾ ಕ್ಷೇತ್ರಗಳ ಪೈಕಿ 31 ಕ್ಷೇತ್ರಗಳನ್ನು ಗೆದ್ದಿರುವ ಪಕ್ಷವು ಸಿಕ್ಕಿಂನ ಏಕೈಕ ಲೋಕಸಭಾ ಸ್ಥಾನವನ್ನೂ ಗೆದ್ದುಕೊಂಡಿದೆ. ವಿಶೇಷವೆಂದರೆ, ಲೋಕಸಭೆ ಚುನಾವಣೆಯ ಜೊತೆಗೇ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯೂ ನಡೆದಿತ್ತು.

 

Ad
Ad
Nk Channel Final 21 09 2023
Ad