ನವದೆಹಲಿ : ಸಿಡಿಲು ಬಡಿದು ಏಳು ಜನ ದಾರುಣವಾಗಿ ಮೃತಪಟ್ಟ ಘಟನೆ ಛತ್ತೀಸ್‌ಗಢದ ಬಲೋಡಾ ಬಜಾರ್‌ನ ಮೊಹ್ತಾರಾ ಗ್ರಾಮದಲ್ಲಿ ಇಂದು ನಡೆದಿದೆ. ಇನ್ನು ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಮೃತರನ್ನು ಮುಖೇಶ್ (20), ಟಂಕರ್ (30), ಸಂತೋಷ್ (40), ಥಾನೇಶ್ವರ್ (18), ಪೋಖ್ರಾಜ್ (38), ದೇವ್ (22) ಮತ್ತು ವಿಜಯ್ (23) ಎಂದು ಗುರುತಿಸಲಾಗಿದ್ದು, ವಿಶಾಂಬರ್, ಬಿಟ್ಟು ಸಾಹು ಮತ್ತು ಚೇತನ್ ಸಾಹು ಗಾಯಗೊಂಡಿದ್ದಾರೆ.
ಆಟದ ಮೈದಾನದಿಂದ ವಾಪಸ್ ಬರುವಾಗ ಧಾರಾಕಾರ ಮಳೆ ಆರಂಭವಾಗಿದೆ. ಈ ವೇಳೆ ಮರದಡಿ ಆಶ್ರಯ ಪಡೆದಾಗ ಸಿಡಿಲು ಬಡಿದಿದೆ ಎಂದು ಬಲೋಡಾ ಬಜಾರ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಸಿಂಗ್ ತಿಳಿಸಿದ್ದಾರೆ.
Ad