Bengaluru 21°C

ಅಕ್ರಮ ಮದ್ಯ ಸೇವಿಸಿ ಏಳು ಮಂದಿ ಮೃತ್ಯು

ಅಕ್ರಮ ಮದ್ಯವನ್ನು ಸೇವಿಸಿ ಏಳು ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರ ಪಶ್ಚಿಮ ಚಂಪಾರಣ್ಯ ಜಿಲ್ಲೆಯ ಬೆಟ್ಟೈ ನಲ್ಲಿ ನಡೆದಿದೆ.

ಬಿಹಾರ : ಅಕ್ರಮ ಮದ್ಯವನ್ನು ಸೇವಿಸಿ ಏಳು ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರ ಪಶ್ಚಿಮ ಚಂಪಾರಣ್ಯ ಜಿಲ್ಲೆಯ ಬೆಟ್ಟೈ ನಲ್ಲಿ ನಡೆದಿದೆ.


ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದೆಯೆನ್ನಲಾಗಿದ್ದು, ಭಾನುವಾರ ಪೊಲೀಸರು ಆಗಮಿಸುವ ಮುನ್ನವೇ ಪಾರ್ಥಿವ ಶರೀರಗಳ ಅಂತ್ಯ ಸಂಸ್ಕಾರ ನಡೆದು ಹೋಗಿತ್ತು. ಈ ಘಟನೆಯ ಬಗ್ಗೆ ತನಿಖೆಗೆ ಬಿಹಾರ ಸರ್ಕಾರ ಆದೇಶಿಸಿದೆ.


ಎಲ್ಲಾ ಸಾವುಗಳೂ ಸಹ ಲೋರಿಯಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳೀಯರು ಅಕ್ರಮ ಮದ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆರೋಪ ತಳ್ಳಿ ಹಾಕಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶೌರ್ಯ ಸುಮನ್‌ , ಎರಡು ಸಾವುಗಳು ಬೇರೆ ಬೇರೆ ಕಾರಣಗಳಿಂದ ಸಂಭವಿಸಿದೆ. ಮೊದಲ ಸಾವು ಜ. 15 ರಂದೇ ಆಗಿದ್ದರೂ ಜನರು ಈ ಕೃತ್ಯವನ್ನು ಮುಚ್ಚಿಟ್ಟಿರುವುದು ಬೆಳಕಿಗೆ ಬಂದಿರುವುದಾಗಿ ತಿಳಿಸಿದ್ದಾರೆ.


Nk Channel Final 21 09 2023