ನಾರಾಯಣಪುರ : ಛತ್ತೀಸ್‌ಗಢದಲ್ಲಿ ಪೊಲೀಸರು ಮತ್ತು ನಕ್ಸಲೀಯರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಏಳು ನಕ್ಸಲೀಯರು ಪ್ರಾಣ ಕಳೆದುಕೊಂಡಿದ್ದಾರೆ. ನಾರಾಯಣಪುರ-ದಾಂತೇವಾಡ ಜಿಲ್ಲೆಗಳ ಹಡಿಭಾಗ ಗೋಬೆಲ್ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಮಾವೋವಾದಿಗಳ ಚಲನವನಲನಗಳ ಬಗ್ಗೆ ಮಾಹಿತಿ ಪಡೆದ ನಂತರ, ಸ್ಥಳೀಯ ಪೊಲೀಸರು ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು ಬಾರ್ಡರ್ ಪೊಲೀಸರು ಜಂಟಿ ಕಾರ್ಯಚರಣೆಯನ್ನು ಪ್ರಾರಂಭಿಸಿದರು.
Ad
ಈ ಸಂದರ್ಭದಲ್ಲಿ ನಕ್ಸಲೀಯರು ಸಹ ಪ್ರತಿರೋಧ ತೋರಿದ್ದು, ಗಂಡಿನ ದಾಳಿ ತೀವ್ರಗೊಳ್ಳುತ್ತಿದ್ದಂತೆ ಏಳು ನಕ್ಸಲೀಯರು ಮೃತಪಟ್ಟಿದ್ದಾರೆ. ಮೃತರನ್ನು ನಾರಾಯಣಪುರ, ದಾಂತೇವಾಡ, ಬಸ್ತಾವ್ ಮತ್ತು ಕೊಂಡಗಾಂವ್ ಜಿಲ್ಲೆಗೆ ಸೇರಿದವರು ಎಂದು ಗುರುತಿಸಲಾಗಿದೆ.
Ad
Ad