Bengaluru 22°C
Ad

ಸೆಮಿಕಾನ್ ಇಂಡಿಯಾ 2024 ಕಾನ್ಫೆರೆನ್ಸ್ : ಮೋದಿ ಚಾಲನೆ

ಪ್ರಧಾನಿ ಮೋದಿ ಇಂದು ಬೆಳಗ್ಗೆ ಸೆಮಿಕಾನ್ ಇಂಡಿಯಾ 2024 ಕಾನ್ಫೆರೆನ್ಸ್ ಅನ್ನು ಉದ್ಘಾಟಿಸಿದ್ದಾರೆ.

ನವದೆಹಲಿ: ಪ್ರಧಾನಿ ಮೋದಿ ಇಂದು ಬೆಳಗ್ಗೆ ಸೆಮಿಕಾನ್ ಇಂಡಿಯಾ 2024 ಕಾನ್ಫೆರೆನ್ಸ್ ಅನ್ನು ಉದ್ಘಾಟಿಸಿದ್ದಾರೆ. ಉತ್ತರಪ್ರದೇಶ ರಾಜ್ಯಕ್ಕೆ ಸೇರಿದ ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್​ಪೋ ಮಾರ್ಟ್​ನಲ್ಲಿ ಮೂರು ದಿನಗಳ ಕಾಲ ಸೆಮಿಕಾನ್ ಇಂಡಿಯಾ ಸಮಾವೇಶ ನಡೆಯಲಿದೆ.

ಸೆಮಿಕಂಡಕ್ಟರ್ ಕ್ಷೇತ್ರದ ಜಾಗತಿಕ ಸಂಸ್ಥೆಗಳ ಸಿಇಒಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ಡಾ. ಅಶ್ವಿನಿ ವೈಷ್ಣವ್ ಮೊದಲಾದ ಹಲವರು ಉಪಸ್ಥಿತರಿದ್ದರು. ಸೆಪ್ಟೆಂಬರ್ 13ರವರೆಗೆ ಮೂರು ದಿನಗಳ ಕಾಲ ನಡೆಯುವ ಸೆಮಿಕಾನ್ ಇಂಡಿಯಾ ಸಮಾವೇಶದಲ್ಲಿ ಸೆಮಿಕಂಡಕ್ಟರ್ ಭವಿಷ್ಯ ರೂಪಿಸುವುದು ಈ ಬಾರಿಯ ಥೀಮ್ ಆಗಿದೆ. ಭಾರತವನ್ನು ಜಾಗತಿಕ ಸೆಮಿಕಂಡಕ್ಟರ್ ಹಬ್ ಆಗಿ ಅಭಿವೃದ್ಧಿಪಡಿಸಬಲ್ಲಂತಹ ಕಾರ್ಯತಂತ್ರ ಮತ್ತು ನೀತಿಗಳನ್ನು ಪ್ರಚುರಪಡಿಸಲಾಗುತ್ತದೆ.

ಈ ಸಮಾವೇಶದಲ್ಲಿ 250ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಳ್ಳುತ್ತಿದ್ದಾರೆ. 150ಕ್ಕೂ ಹೆಚ್ಚು ತಜ್ಞರು ಮಾತನಾಡಲಿದ್ದಾರೆ. ಬಹುತೇಕ ಜಾಗತಿಕ ಸೆಮಿಕಂಡಕ್ಟರ್ ಕಂಪನಿಗಳು ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ಘಟಕಗಳನ್ನು ನಿರ್ಮಿಸಲು ಆಸಕ್ತಿ ತೋರಿವೆ. ಚಿಪ್ ತಯಾರಿಕೆಗೆ ಪೂರಕವಾದ ಇತರ ಉದ್ದಿಮೆಗಳೂ ಕೂಡ ಭಾರತದಲ್ಲೇ ನೆಲೆಗೊಳ್ಳಲಿವೆ. ಆ ನಿಟ್ಟಿನಲ್ಲಿ ಸರ್ಕಾರ ಸೆಮಿಕಂಡಕ್ಟರ್ ನೀತಿಗಳನ್ನು ರೂಪಿಸುತ್ತಿದೆ. ಈ ಸಮಾವೇಶದಲ್ಲೂ ಈ ನೀತಿಗಳು ಅನಾವರಣಗೊಳ್ಳಬಹುದು.

ನಿನ್ನೆ ಮಂಗಳವಾರ ಸಮಾವೇಶದ ಪೂರ್ವಭಾವಿ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿಸ್ತೃತ ಸೆಮಿಕಂಡಕ್ಟರ್ ಸರಬರಾಜು ಸರಪಳಿಯಲ್ಲಿ ಭಾರತ ಪ್ರಮುಖ ಭಾಗಿದಾರ ದೇಶವಾಗುವ ಸಾಮರ್ಥ್ಯ ಹೊಂದಿದೆ. ಸರ್ಕಾರದ ನೀತಿಯಲ್ಲಿ ಸ್ಥಿರತೆ ಇರಲಿದೆ ಎಂದು ವಾಗ್ದಾನ ನೀಡಿದ್ದಾರೆ. ಇದೇ ವೇಳೆ ಪ್ರಮುಖ ಜಾಗತಿಕ ಸೆಮಿಕಂಡಕ್ಟರ್ ಕಂಪನಿಗಳ ಸಿಇಒಗಳು ಮಾತನಾಡುತ್ತಾ, ಭಾರತ ಸರ್ಕಾರದ ನೀತಿಗಳನ್ನು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ಶ್ಲಾಘಿಸಿದ್ದಾರೆ.

Ad
Ad
Nk Channel Final 21 09 2023