Bengaluru 22°C
Ad

ಮೂತ್ರ ಬೆರೆಸಿ ಜ್ಯೂಸ್‌ ಮಾರಾಟ: ಅಂಗಡಿ ಧ್ವಂಸ, ಆರೋಪಿಯ ಬಂಧನ

ಹಣ್ಣಿನ ರಸದ ಅಂಗಡಿಯ ವ್ಯಾಪಾರಿಯೊಬ್ಬ ತನ್ನ ಗ್ರಾಹಕರಿಗೆ ಮೂತ್ರ ಬೆರೆಸಿದ ಜ್ಯೂಸ್‌ ಮಾರಾಟ ಮಾಡುತ್ತಿದ್ದ ವಿಚಿತ್ರ ಪ್ರಕರಣವೊಂದು ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಘಜಿಯಾಬಾದ್‌ : ಹಣ್ಣಿನ ರಸದ ಅಂಗಡಿಯ ವ್ಯಾಪಾರಿಯೊಬ್ಬ ತನ್ನ ಗ್ರಾಹಕರಿಗೆ ಮೂತ್ರ ಬೆರೆಸಿದ ಜ್ಯೂಸ್‌ ಮಾರಾಟ ಮಾಡುತ್ತಿದ್ದ ವಿಚಿತ್ರ ಪ್ರಕರಣವೊಂದು ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಈ ವಿಷಯ ತಿಳಿಯುತ್ತಿದ್ದಂತೆಯೇ ಉದ್ರಿಕ್ತ ಜನರ ಗುಂಪು ವ್ಯಾಪಾರಿಯನ್ನು ಮನಬಂದಂತೆ ಥಳಿಸಿ ಅಂಗಡಿಯನ್ನು ಧ್ವಂಸಗೊಳಿಸಿದ್ದಾರೆ. ಖುಷಿ ಜ್ಯೂಸ್‌ ಕಾರ್ನರ್‌ ಎಂಬ ಅಂಗಡಿ ನಡೆಸುತ್ತಿದ್ದ ಮೊಹಮ್ಮದ್‌ ಅಮೀರ್‌ ಮತ್ತು ಕೈಫ್‌ ಎಂಬ ಇಬ್ಬರು ಈ ದುಷ್ಕೃತ್ಯ ಎಸೆಗಿದ್ದಾರೆನ್ನಲಾಗಿದೆ.

ಘಟನೆಯ ಬಳಿಕ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಂಗಡಿಯಲ್ಲಿ ಮಾನವ ಮೂತ್ರವನ್ನು ಸಂಗ್ರಹಿಸಿ ಇಟ್ಟಿದ್ದ ಬಾಟಲಿಯೊಂದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಈ ವ್ಯಾಪಾರಿಗಳು ಯಾವ ಕಾರಣಕ್ಕೆ ಈ ದುಷ್ಕೃತ್ಯ ಎಸೆಗುತ್ತಿದ್ದರೆಂದು ತಿಳಿದುಬಂದಿಲ್ಲ. ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ.

Ad
Ad
Nk Channel Final 21 09 2023