Bengaluru 22°C
Ad

ಶಂಕಿತ ಉಗ್ರರಿಂದ ರಾಕೆಟ್ ದಾಳಿ: ಎರಡು ಕಟ್ಟಡಗಳಿಗೆ ಹಾನಿ!

ಶಂಕಿತ ಉಗ್ರರ ಅಟ್ಟಹಾಸ ಮುಂದುವರೆದಿದೆ. ರಾಕೆಟ್ ದಾಳಿ ನಡೆಸಿದ್ದು, ಎರಡು ಕಟ್ಟಡಗಳಿಗೆ ಹಾನಿಯಾಗಿದೆ.

ಮಣಿಪುರ: ಶಂಕಿತ ಉಗ್ರರ ಅಟ್ಟಹಾಸ ಮುಂದುವರೆದಿದೆ. ರಾಕೆಟ್ ದಾಳಿ ನಡೆಸಿದ್ದು, ಎರಡು ಕಟ್ಟಡಗಳಿಗೆ ಹಾನಿಯಾಗಿದೆ. ಮಣಿಪುರದ ರಾಜಧಾನಿ ಇಂಫಾಲ್‌ನಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ಟ್ರೊಂಗ್ಲಾವೊಬಿಯ ತಗ್ಗು ಪ್ರದೇಶದ ಕಡೆಗೆ ಚುರಾಚಂದ್‌ಪುರ ಜಿಲ್ಲೆಯ ಹತ್ತಿರದ ಗುಡ್ಡಗಾಡು ಪ್ರದೇಶಗಳ ಎತ್ತರದ ಸ್ಥಳಗಳಿಂದ ರಾಕೆಟ್‌ಗಳನ್ನು ಹಾರಿಸಲಾಯಿತು.

ಉಡಾವಣೆಯಾದ ರಾಕೆಟ್‌ಗಳ ವ್ಯಾಪ್ತಿಯು 3 ಕಿಲೋಮೀಟರ್‌ಗಿಂತಲೂ ಹೆಚ್ಚು ಎಂದು ಅಂದಾಜಿಸಲಾಗಿದೆ. ದಾಳಿಯಲ್ಲಿ ಯಾರೂ ಗಾಯಗೊಂಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ರಾಕೆಟ್ ಸ್ಫೋಟದಿಂದಾಗಿ ಸ್ಥಳೀಯ ಸಮುದಾಯ ಭವನ ಹಾಗೂ ಮನೆಗೆ ಹಾನಿಯಾಗಿದೆ. ಶಂಕಿತ ಉಗ್ರರು ಬಿಷ್ಣುಪುರ್ ಜಿಲ್ಲೆಯ ಕಡೆಗೆ ಹಲವಾರು ಸುತ್ತು ಗುಂಡು ಹಾರಿಸಿದರು.

ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದರು. ಗುರುವಾರ ರಾತ್ರಿ ಟ್ರೋಂಗ್ಲೋಬಿಯಿಂದ ಕೆಲವು ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಕುಂಬಿ ಗ್ರಾಮದಲ್ಲಿ ಹಲವಾರು ಡ್ರೋನ್‌ಗಳು ನೆಲದಿಂದ 100 ಮೀಟರ್‌ಗಿಂತ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುತ್ತಿರುವುದನ್ನು ಕೆಲವರು ಕಂಡಿದ್ದಾರೆ. ಶಂಕಿತ ಕುಕಿ ಉಗ್ರರು ಇಂದು ಬೆಳಗ್ಗೆ ಬಿಷ್ಣುಪುರ್ ಜಿಲ್ಲೆಯ ಟ್ರೋಂಗ್ಲಾಬಿ ಪ್ರದೇಶದಲ್ಲಿ ಬಾಂಬ್ ಸ್ಫೋಟ ನಡೆಸಿದ್ದಾರೆ. ಅಧಿಕಾರಿಗಳು ಘಟನಾ ಸ್ಥಳದಲ್ಲಿದ್ದು ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದು, ತನಿಖೆ ಮುಂದುವರೆದಿದೆ.

Ad
Ad
Nk Channel Final 21 09 2023