Bengaluru 23°C
Ad

ಉತ್ತರಾಖಂಡ್ ಚಾರಣದ ವೇಳೆ ದುರಂತ: ಗೂಗಲ್ ನಲ್ಲಿ ಕೆಲಸ ಮಾಡ್ತಿದ್ದ ಶಿರಸಿ ಯುವತಿ ಸಾವು

Shirasi

ಉತ್ತರಾಖಂಡ್:ತ್ತರಾಖಂಡ್ ನಲ್ಲಿ ಚಾರಣಕ್ಕೆ ತೆರಳಿದ್ದ ರಾಜ್ಯದ 9 ಜನರು ಸಾವನ್ನಪ್ಪಿದ್ದು, ಅವರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಯುವತಿ ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪದ್ಮಿನಿ ಹೆಗಡೆ (35) ಮೃತ ಯುವತಿ. ಬೆಂಗಳೂರಿನ ಗೂಗಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಪದ್ಮಿನಿ ಸಾವಿನ ಬಗ್ಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಮಾಹಿತಿ ಸಿಕ್ಕಿದೆ. ಪದ್ಮಿನಿ ಹೆಗಡೆ ಶಿರಸಿ ತಾಲೂಕಿನ ಜಾಗನಹಳ್ಳಿ ನಿವಾಸಿ. ಗೂಗಲ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಮೇ 9ರಿಂದ ಜೂನ್ 7ರವರೆಗೆ ಟ್ರೆಕಿಂಗ್ ಗಾಗಿ ಅನುಮತಿ ಪಡೆದಿದ್ದರು ಎಂದು ತಿಳಿದುಬಂದಿದೆ. ಇನ್ನು ಉತ್ತರಾಖಂಡ್ ಚಾರಣದ ವೇಳೆ ಒಟ್ಟು 9 ಜನರು ಸಾವನ್ನಪ್ಪಿದ್ದು, ಎಲ್ಲಾ ಮೃತದೇಹಗಳನ್ನು ನಾಳೆ ದೆಹಲಿಯಿಂದ ಬೆಂಗಳೂರಿಗೆ ಸ್ಥಳಾಂತರಿಸಲಾಗುತ್ತದೆ.

Ad
Ad
Nk Channel Final 21 09 2023
Ad