Bengaluru 23°C
Ad

ದೆಹಲಿ, ಬಿಹಾರ​, ಒಡಿಶಾ ಸೇರಿ ಹಲವು ಕಡೆ ದಾಖಲೆಯ ಉಷ್ಣಾಂಶ

ದೇಶದಲ್ಲಿ ಸೂರ್ಯನ ತಾಪಮಾನ ಹೆಚ್ಚುತ್ತಿದ್ದು, ಉಷ್ಣಾಂಶದ ದಾಖಲೆ ಏರುತ್ತಿದೆ. ಇಂದು ಮಹಾರಾಷ್ಟ್ರದ ನಾಗಪುರದಲ್ಲಿ 56 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ನವದೆಹಲಿ: ದೇಶದಲ್ಲಿ ಸೂರ್ಯನ ತಾಪಮಾನ ಹೆಚ್ಚುತ್ತಿದ್ದು, ಉಷ್ಣಾಂಶದ ದಾಖಲೆ ಏರುತ್ತಿದೆ. ಇಂದು ಮಹಾರಾಷ್ಟ್ರದ ನಾಗಪುರದಲ್ಲಿ 56 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಇದು ಭಾರತದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಗರಿಷ್ಠ ಉಷ್ಣಾಂಶವಾಗಿದೆ. ಬೇಸಿಗೆಯ ಬಿರು ಬಿಸಿಲು, ಗರಿಷ್ಠ ಉಷ್ಣಾಂಶದಿಂದ ಉತ್ತರ ಭಾರತದ ಜನ ತತ್ತರಿಸಿ ಹೋಗುತ್ತಿದ್ದಾರೆ.

ಮೇ ತಿಂಗಳು ಮುಕ್ತಾಯಗೊಂಡು ಜೂನ್‌ ತಿಂಗಳು ಆರಂಭವಾಗುವ ಮೊದಲೇ 54 ಮಂದಿ ಬಿರು ಬಿಸಿಲಿಗೆ ಬಲಿಯಾಗಿದ್ದಾರೆ. ಈಗಾಗಲೇ ಹಲವು ರಾಜ್ಯಗಲ್ಲಿ ಮುಂಗಾರು ಅವಧಿಗೂ ಮುನ್ನವೇ ಮಳೆರಾಯನ ಆರ್ಭಟ ಜೋರಾಗಿದೆ.

ದೆಹಲಿ, ಬಿಹಾರ್​, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಒಡಿಶಾ ಸೇರಿ ಹಲವು ಕಡೆಗಳಲ್ಲಿ ಬಿಸಿಲಿನ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದೇ ಬಿಸಿಲಿನ ಹೊಡೆತಕ್ಕೆ ಒಟ್ಟು 54 ಮಂದಿ ಮೃತಪಟ್ಟಿದ್ದಾರೆ.

ದಾಖಲೆಯ ಉಷ್ಣಾಂಶಕ್ಕೆ ಹೀಟ್ ಸ್ಟ್ರೋಕ್​​ನಿಂದ ಸಾಕಷ್ಟು ಮಂದಿ ಉಸಿರು ಚೆಲ್ಲುತ್ತಿದ್ದಾರೆ. ಇನ್ನು, ಒರಿಸ್ಸಾದ ರೂರ್ಕೆಲಾದಲ್ಲಿ ನಿನ್ನೆ ಮಧ್ಯಾಹ್ನದ ಬಳಿಕ ಹೀಟ್ ಸ್ಟ್ರೋಕ್​ನಿಂದ 10 ಮಂದಿ ಸಾವನ್ನಪ್ಪಿದ್ದಾರೆ. ಜನರ ದೇಹದಲ್ಲಿ 103 ಡಿಗ್ರಿಯಿಂದ 104 ಡಿಗ್ರಿ ಫ್ಯಾರನ್ ಹೀಟ್‌ ಉಷ್ಣಾಂಶ ದಾಖಲಾಗಿದೆ. ಇದರಿಂದಾಗಿ ಹೀಟ್​ ಸ್ಚ್ರೋಕ್​ನಿಂದಲೇ 10 ಮಂದಿ ಸಾವನ್ನಪ್ಪುತ್ತಿದ್ದಾರೆ.

ಬಿಹಾರದಲ್ಲಿ 32 ಜನರು ಶಾಖದ ಹೊಡೆತದಿಂದ ಸಾವನ್ನಪ್ಪಿದ್ದಾರೆ. ಅದರಲ್ಲಿ 17 ಮಂದಿ ಔರಂಗಾಬಾದ್‌ನಲ್ಲಿ, ಆರು ಅರ್ರಾಹ್, ಗಯಾ ಮತ್ತು ರೋಹ್ತಾಸ್‌ನಲ್ಲಿ ತಲಾ ಮೂವರು, ಬಕ್ಸರ್‌ನಲ್ಲಿ ಇಬ್ಬರು ಮತ್ತು ಪಾಟ್ನಾದಲ್ಲಿ ಒಬ್ಬರು. ಜಾರ್ಖಂಡ್‌ನ ಪಲಮು ಮತ್ತು ರಾಜಸ್ಥಾನದಲ್ಲಿ ತಲಾ ಐವರು ಸಾವನ್ನಪ್ಪಿದ್ದರೆ, ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

ಇದಕ್ಕೂ ಮುನ್ನ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಬಿಹಾರ ಮೂಲದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರ ದೇಹದಲ್ಲಿ ಅತಿಯಾದ ಉಷ್ಣಾಂಶ ಮತ್ತಷ್ಟು ಹದಗೆಡಿಸಿತ್ತು. ಅವರ ದೆಹದಲ್ಲಿ ಜ್ವರದ ತೀವ್ರತೆಯು 108 ಟೆಂಪ್ರೆಚರ್​​ಗೆ ತಲುಪಿ ಸಾವನ್ನಪ್ಪಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ತೀವ್ರ ಬಿಸಿಗಾಳಿಯಿಂದ ಜನ ಹೈರಾಣಾಗಿದ್ದಾರೆ.

 

 

 

Ad
Ad
Nk Channel Final 21 09 2023
Ad