Ad

ಇಂದು ಅದ್ಧೂರಿ ಜಗನ್ನಾಥ ರಥ ಯಾತ್ರೆ; ಜನಸಂದಣಿ ನಿಭಾಯಿಸಲು ಎಐ ತಂತ್ರಜ್ಞಾನ ಬಳಕೆ

Jaganth

ಖೋರ್ಧಾ: ಒಡಿಶಾದ ದೇವಾಲಯ ನಗರ ಪುರಿಯಲ್ಲಿ ಸಂಭ್ರಮ ಮನೆ ಮಾಡಿದೆ. ಇಂದಿನಿಂದ ಆರಂಭವಾಗುವ ಭಗವಾನ್ ಜಗನ್ನಾಥ ವಾರ್ಷಿಕ ರಥಯಾತ್ರೆಗೆ ನಗರ ಸಜ್ಜಾಗಿದೆ. ಈ ಬಾರಿಯ ರಥಯಾತ್ರೆ ವಿಶೇಷವಾಗಿದೆ. ಪ್ರತಿವರ್ಷ ಒಂದು ದಿನ ಮಾತ್ರ ನಡೆಯುತ್ತಿದ್ದ ರಥಯಾತ್ರೆ ಈ ಬಾರಿ ಎರಡು ದಿನ ನೆರವೇರುತ್ತಿದೆ.

Ad
300x250 2

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಲಕ್ಷಾಂತರ ಭಕ್ತರೊಂದಿಗೆ ಈ ರಥಯಾತ್ರೆಯನ್ನು ವೀಕ್ಷಿಸಲಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ ವಿಶೇಷ ವ್ಯವಸ್ಥೆ ಮಾಡಿದೆ. ಯಾತ್ರೆಯನ್ನು ಸುಗಮವಾಗಿ ನಡೆಸಲು ಒಡಿಶಾ ಸರ್ಕಾರ ವಿಸ್ತೃತ ವ್ಯವಸ್ಥೆಗಳನ್ನು ಮಾಡಿದೆ. ಪೊಲೀಸ್‌ ಇಲಾಖೆಯಿಂದ ಬಿಗಿ ಬಂದೋಬಸ್ತ್‌ ಮಾಡಲಾಗಿದೆ.

ದೇವರ ಜನ್ಮಸ್ಥಳವೆಂದು ನಂಬಲಾದ ಗುಂಡಿಚಾ ದೇವಾಲಯಕ್ಕೆ ಕರೆದೊಯ್ಯಲು ನಂದಿಘೋಷ, ತಾಳಧ್ವಜ ಮತ್ತು ದರ್ಪದಲನ್ ರಥಗಳನ್ನು ಶ್ರೀಮಂದಿರದ ಸಿಂಘದ್ವಾರದಲ್ಲಿ (ಸಿಂಹದ್ವಾರ) ಸಿದ್ಧವಾಗಿ ಇರಿಸಲಾಗಿದೆ. ಜಗನ್ನಾಥ ದೇವಾಲಯದಲ್ಲಿ ವಿವಿಧ ಧಾರ್ಮಿಕ ಆಚರಣೆಗಳನ್ನು ಪೂರ್ಣಗೊಳಿಸಿದ ನಂತರ ದೇವತೆಗಳ ಪಹಂಡಿ ಬಿಜೆ ಆಚರಣೆಯು ಮಧ್ಯಾಹ್ನ 1:10 ಕ್ಕೆ ಪ್ರಾರಂಭವಾಗಲಿದೆ. ಗಜಪತಿ ರಾಜ ದಿಬ್ಯಸಿಂಗ ದೇಬ ಅವರು ಸಾಯಂಕಾಲ 4 ಗಂಟೆಗೆ ರಥಗಳಿಗೆ ವಿಧಿವಿಧಾನ ನೆರವೇರಿಸುವರು. ಸಾಯಂಕಾಲ 5 ಗಂಟೆಗೆ ರಥೋತ್ಸವ ಆರಂಭವಾಗಲಿದೆ.

ಭಗವಾನ್ ಜಗನ್ನಾಥ ರಥಯಾತ್ರೆಯ ಸಮಯದಲ್ಲಿ ಪರಿಣಾಮಕಾರಿ ಸಂಚಾರ ಮತ್ತು ಜನಸಂದಣಿ ನಿರ್ವಹಣೆಗಾಗಿ ಒಡಿಶಾ ಪೊಲೀಸರು ಪ್ರಾಯೋಗಿಕ ಆಧಾರದ ಮೇಲೆ AI ತಂತ್ರಜ್ಞಾನವನ್ನು ಬಳಸುತ್ತಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Ad
Ad
Nk Channel Final 21 09 2023
Ad