Ad

ಪುರಿ ಜಗನ್ನಾಥ ಉತ್ಸವದ ವೇಳೆ ಬಲಭದ್ರನ ವಿಗ್ರಹ ಬಿದ್ದು 7 ಮಂದಿಗೆ ಗಾಯ

ಪುರಿ ಜಗನ್ನಾಥ  ದೇವರ ಉತ್ಸವದ ವೇಳೆ ಭಗವಾನ್ ಬಲಭದ್ರನ ವಿಗ್ರಹ ಬಿದ್ದು ಕನಿಷ್ಠ ಏಳು ಮಂದಿ ಗಾಯಗೊಂಡ ಘಟನೆ ನಡೆದಿದೆ.

ಪುರಿ: ಪುರಿ ಜಗನ್ನಾಥ  ದೇವರ ಉತ್ಸವದ ವೇಳೆ ಭಗವಾನ್ ಬಲಭದ್ರನ ವಿಗ್ರಹ ಬಿದ್ದು ಕನಿಷ್ಠ ಏಳು ಮಂದಿ ಗಾಯಗೊಂಡ ಘಟನೆ ನಡೆದಿದೆ.

Ad
300x250 2

ಮಂಗಳವಾರ ಸಂಜೆ ಮೂರು ವಿಗ್ರಹಗಳನ್ನು ರಥಗಳಿಂದ ಗುಂಡಿಚಾ ದೇವಾಲಯದ ಅಡಪ ಮಂಟಪಕ್ಕೆ ಕರೆದೊಯ್ಯುತ್ತಿದ್ದಾಗ ಈ ಘಟನೆ ನಡೆದಿದೆ. ಜಾತ್ರೆಯ ಎಲ್ಲ ಆಚರಣೆಗಳು ಪೂರ್ಣಗೊಂಡ ನಂತರ, ವಿಗ್ರಹಗಳ ‘ಪಹಂಡಿ’ ಪ್ರಾರಂಭವಾಗಿತ್ತು. ಅಲ್ಲಿ ಅರ್ಚಕರು ಹಾಗೂ ಸ್ವಯಂಸೇವಕರು ವಿಗ್ರಹಗಳನ್ನು ನಿಧಾನವಾಗಿ ತಿರುಗಿಸುತ್ತಾ ಮೂರು ಮೂರ್ತಿಗಳನ್ನು ಅಡಪ ಮಂಟಪಕ್ಕೆ ಕೊಂಡೊಯ್ಯುತ್ತಿದ್ದರು.

ಅಂತೆಯೇ ಬಲಭದ್ರನ ವಿಗ್ರಹವನ್ನು ರಥದ ತಲಧ್ವಜದಿಂದ ತೆಗೆದುಕೊಳ್ಳುವಾಗ,  ಚರಮಾಲಾ ಎಂಬ ರಥದ ತಾತ್ಕಾಲಿಕ ರ್ಯಾಂಪ್ ಮೇಲೆ ಜಾರಿ ಸೇವಕರ ಮೇಲೆ ಬಿದ್ದಿದೆ. ಅವರಲ್ಲಿ ಹಲವರು ಗಾಯಗೊಂಡಿದ್ದಾರೆ. ರಕ್ಷಣಾ ಸಿಬ್ಬಂದಿ ಇತರ ಸೇವಕರೊಂದಿಗೆ ಸ್ಥಳಕ್ಕೆ ಧಾವಿಸಿ ವಿಗ್ರಹವನ್ನು ಎತ್ತಿಕೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

https://x.com/otvkhabar/status/1810711589684732151?

 

 

 

Ad
Ad
Nk Channel Final 21 09 2023
Ad