Bengaluru 22°C
Ad

ಎಲ್‌ಪಿಜಿ ಗ್ರಾಹಕರಿಗೆ ಗುಡ್‌ನ್ಯೂಸ್‌ : ಅಡುಗೆ ಅನಿಲ ದರದಲ್ಲಿ ಇಳಿಕೆ

ಜೂನ್‌ 1ರಿಂದ ಜಾರಿಗೆ ಬರುವಂತೆ ತೈಲ ಮಾರುಕಟ್ಟೆ ಕಂಪನಿಗಳು (OMCs) ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆಯನ್ನು 69.50 ರೂ. ಕಡಿಮೆ ಮಾಡಿವೆ (LPG Price Cut). ಇದರೊಂದಿಗೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆ ಬೆಂಗಳೂರಿನಲ್ಲಿ 69.50 ರೂ. ಕಡಿತಗೊಂಡು 1,756 ರೂ.ಗೆ ತಲುಪಿದೆ.

ನವದೆಹಲಿ: ಜೂನ್‌ 1ರಿಂದ ಜಾರಿಗೆ ಬರುವಂತೆ ತೈಲ ಮಾರುಕಟ್ಟೆ ಕಂಪನಿಗಳು (OMCs) ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆಯನ್ನು 69.50 ರೂ. ಕಡಿಮೆ ಮಾಡಿವೆ . ಇದರೊಂದಿಗೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆ ಬೆಂಗಳೂರಿನಲ್ಲಿ 69.50 ರೂ. ಕಡಿತಗೊಂಡು 1,756 ರೂ.ಗೆ ತಲುಪಿದೆ.

Ad

ಇನ್ನು ದೆಹಲಿಯಲ್ಲಿ ಪರಿಷ್ಕೃತ ದರ 1,676 ರೂ. ಆಗಿದೆ. ಹಿಂದೆ 1745.50 ರೂ. ಆಗಿತ್ತು. ಮುಂಬೈಯಲ್ಲಿಯೂ 69.50 ರೂ. ಇಳಿಕೆಯಾಗಿದ್ದು ಹೊಸ ಬೆಲೆಯನ್ನು 1,629 ರೂ.ಗೆ ನಿಗದಿಪಡಿಸಲಾಗಿದೆ. ಚೆನ್ನೈನಲ್ಲಿ 1,840.5೦ ರೂ., ಕೋಲ್ಕತ್ತಾದಲ್ಲಿ ದರ ಪರಿಷ್ಕರಣೆಯ ಬಳಿಕ 1,787 ರೂ. ಇದೆ.

Ad

ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಪ್ರತಿ ತಿಂಗಳ 1ನೇ ತಾರೀಕಿನಂದು ಅಡುಗೆ ಅನಿಲ ಬೆಲೆಗಳನ್ನು ಪರಿಷ್ಕರಿಸುತ್ತವೆ.

Ad

ಪ್ರತಿ ತಿಂಗಳ 1ನೇ ತಾರೀಕಿನಂದು ಅಡುಗೆ ಅನಿಲ ಬೆಲೆಗಳನ್ನು ಪರಿಷ್ಕರಿಸುತ್ತವೆ. ಈ ರೀತಿಯ ಏರಿಳಿತಗಳು ಸಾಮಾನ್ಯವಾಗಿ ಇಂಧನ ವೆಚ್ಚಗಳು ಮತ್ತು ಮಾರುಕಟ್ಟೆ ಡೈನಾಮಿಕ್ಸ್ ಬದಲಾವಣೆಗಳಿಂದ ಪ್ರಭಾವಿತವಾಗಿರುತ್ತವೆ.

Ad

ನಗರ             ಪರಿಷ್ಕೃತ ದರ          ಹಿಂದಿನ ದರ
ಬೆಂಗಳೂರು       1,756 ರೂ.           1,825.50
ಕೋಲ್ಕತ್ತಾ        1,787 ರೂ.              1,859 ರೂ.
ಮುಂಬೈ           1,629 ರೂ.                1,698.50 ರೂ.
ಚೆನ್ನೈ              1,840.50 ರೂ.              1,911 ರೂ.
ನವದೆಹಲಿ         1,676 ರೂ.             1745.50 ರೂ.

Ad
Ad
Ad
Nk Channel Final 21 09 2023